Subscribe to Updates

    Get the latest creative news from FooBar about art, design and business.

    What's Hot

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಬೇಸಿಗೆ ರಂಗ ಶಿಬಿರದ ವಿದ್ಯಾರ್ಥಿಗಳಿಂದ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನ | ಮೇ 31

    May 30, 2025

    ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣೆ’
    Commemoration

    ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣೆ’

    January 30, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಶಾಲನಗರ : ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 28 ಜನವರಿ 2025ರಂದು ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಕಣಿವೆ ಭಾರಧ್ವಜ್ “ಮೈಸೂರು ಮಲ್ಲಿಗೆ ಹೂವಿನ ಪರಿಮಳದಷ್ಟೇ ಸೊಗಸಾಗಿದ್ದವು ಕೆ.ಎಸ್. ನರಸಿಂಹಸ್ವಾಮಿ ಬರೆದ ದಾಂಪತ್ಯ ಗೀತೆಗಳು. ಕೆ.ಎಸ್. ನರಸಿಂಹಸ್ವಾಮಿ ಬರೆದಂತಹ ಗೀತೆಗಳು ಇಂದಿಗೂ ಹಾಗೂ ಎಂದೆಂದಿಗೂ ಕೇಳುಗರ ಮನವನ್ನು ತಣಿಸುತ್ತವೆ. ತಮ್ಮ ಪತ್ನಿಯ ಕುರಿತ ಬರೆದಂತಹ ಕವನಗಳಲ್ಲಿ ಸಾರ್ಥಕ ದಾಂಪತ್ಯ ಜೀವನದ ಸೊಗಸು ಅಡಗಿದೆ. ಬದುಕಿನಲ್ಲಿ ಬಡತನವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರುಕವಿಯಾಗಿ ನಮ್ಮೊಡನೆ ಇದ್ದಾರೆ” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಪ್ರಧಾನ ನುಡಿಗಳನ್ನಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್, “ಕೆ.ಎಸ್. ನರಸಿಂಹಸ್ವಾಮಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕವಿ. ಬದುಕಿನಲ್ಲಿ ಬಡತನವಿದ್ದರೂ ಕೂಡ ತಮ್ಮತನ ಬಿಡಲಾಗದ ಕೆ.ಎಸ್.ನ. ತಮ್ಮ ಕಲ್ಪನಾ ಲೋಕದಲ್ಲಿ ತಲ್ಲೀನರಾಗಿ ಬರೆದ ಅದೆಷ್ಟೋ ಪದ್ಯಗಳು ಇಂದು ಹೆಸರಾಂತ ಗೀತೆಗಳಾಗಿವೆ. ಮೈಸೂರು ಮಲ್ಲಿಗೆ ಕವನ ಸಂಕಲನ ಕವಿಗೆ ಅಗಾಧ ಮಟ್ಟದ ಹೆಸರು ತಂದು ಕೊಟ್ಟ ಮೇರು ಸಂಕಲನ. ಕೊನೆಗೆ ಸ್ವಂತ ಮನೆಯೂ ಇಲ್ಲದ ಕೆ.ಎಸ್.ನ. ತಮ್ಮ ಪತ್ನಿಯ ಆರೋಗ್ಯಕ್ಕಾಗಿ ತಮ್ಮ ಕವಿತೆಗಳ ಬರವಣಿಗೆಯ ಕಾಫಿಯ ಹಕ್ಕನ್ನು ಮಾರಾಟ ಮಾಡುತ್ತಾರೆ” ಎಂದರು. ಕವಿ ಕೆ.ಎಸ್.ನ. ಜೀವಿತಾವಧಿಯಲ್ಲಿ ಮಂಡ್ಯ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಅವರ ಮನೆಗೆ ತೆರಳಿದ್ದಾಗ ಕೆ.ಎಸ್.ನ. ದಂಪತಿಗಳು ನೀಡಿದ ಅತಿಥ್ಯವನ್ನು ನಾಗೇಶ್ ಈ ಸಂದರ್ಭ ಸ್ಮರಿಸಿದರು.

    ಬರಹಗಾರ್ತಿ ರಾಣಿ ವಸಂತ್ ಮಾತನಾಡಿ, “ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ ಹೊಂದಲು ಕೆ.ಎಸ್. ನರಸಿಂಹಸ್ವಾಮಿಯವರ ಕವನ ಸಂಕಲನಗಳನ್ನು ಒದಲು ಕರೆ ಕೊಟ್ಟರಲ್ಲದೇ ಕೆ.ಎಸ್. ನರಸಿಂಹಸ್ವಾಮಿ ಕಾಲಘಟ್ಟದಲ್ಲಿನ ಕವಿಗಳು ಎಷ್ಟೇ ಸಾಹಿತ್ಯ ಕೃಷಿ ಮಾಡಿದರೂ ಕೂಡ ಬಡತನವನ್ನು ಗೆಲ್ಲಲಾಗಲಿಲ್ಲ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬಡತನವನ್ನೇ ಕಾಣದ ಸಾಹಿತಿಗಳಿದ್ದಾರೆ” ಎಂದರು.

    ಕುವೆಂಪು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕುಶಾಲನಗರದ ಕನ್ನಡ ಭಾರತಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್.ನ. ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿದರು. ಸಾಹಿತ್ಯಾಸಕ್ತರ ವೇದಿಕೆ ಸಂಚಾಲಕ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ವಾಗ್ಮಿ ಉ.ರಾ. ನಾಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    commemoration felicitation Literature
    Share. Facebook Twitter Pinterest LinkedIn Tumblr WhatsApp Email
    Previous Articleಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭ | ಫೆಬ್ರವರಿ 02
    Next Article ಲೋಕಾರ್ಪಣೆಗೊಂಡ ಕೆ. ಜಯಲಕ್ಷ್ಮೀ ಇವರ ‘ಮತ್ತೆ ವಸಂತ’ ಕಥಾ ಸಂಕಲನ.
    roovari

    Add Comment Cancel Reply


    Related Posts

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ

    May 30, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಹಾಸನದ ಸಾಹಿತ್ಯ ಸಂಘಟನೆಯಿಂದ 330ನೇ ಮನೆ ಮನೆ ಕವಿಗೋಷ್ಠಿ | ಜೂನ್ 01

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.