ಕೊಡಗು : “ಕಲಾ ಉತ್ಸವ ಕೊಡಗು 2025” ಕಾರ್ಯಕ್ರಮದ ವತಿಯಿಂದ ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಕರ್ನಾಟಕ ವಿಕಾಸ ರಂಗ ಮತ್ತು ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಬಳಗಗಳ ಸದಸ್ಯರಿಂದ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ವಿರಾಜಪೇಟೆ ಮೊಗರಗಲ್ಲಿ ಏರ್ಪಡಿಸಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು, ಕವಯಿತ್ರಿಯರು, ಗಾಯಕರು ವೈಲೇಶ್ ಪಿ.ಎಸ್. ಕೊಡಗು 8861405738, ಕಲಾ ಉತ್ಸವ ಕೊಡಗು 2025ರ ರೂವಾರಿ ಸಾದಿಕ್ ಹಂಸ +91 98458 20257, ಹಿರಿಯ ಕವಿಗಳಾದ ಗಿರೀಶ ಕಿಗ್ಗಾಲು 091413 95426, ಕವಯಿತ್ರಿ ವಿಮಲ ದಶರಥ +91 90086 13729, ರಾಜ್ಯ ಸಂಚಾಲಕರಾದ ಭಾಗ್ಯವತಿ ಅಣ್ಣಪ್ಪ +91 98454 75153, ಇವರ ದೂರವಾಣಿ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಲವಿನ್ ಲೋಪೇಸ್‌ರವರ ಕೃತಿ ಲೋಕಾರ್ಪಣೆ ಇರುತ್ತದೆ.
