ಉಡುಪಿ : ಉಡುಪಿಯ ರಾಗಧನ ಸಂಸ್ಥೆಯ ವತಿಯಿಂದ ಕೊಡಲ್ಪಡುವ, ಪ್ರಸಿದ್ಧ ಸಂಶೋಧಕಿ ಡಾ. ಸುಶೀಲಾ ಉಪಾಧ್ಯಾಯ ಅವರ ಸ್ಮರಣಾರ್ಥ, ಡಾ. ಯು.ಪಿ. ಉಪಾಧ್ಯಾಯರು ಸೂಚಿಸಿರುವ ‘ರಾಗ ಧನ ಪಲ್ಲವಿ ಪ್ರಶಸ್ತಿ’ಗೆ ಈ ಬಾರಿ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆಯಾಗಿರುವರು.
ದಿನಾಂಕ 07 ಫೆಬ್ರವರಿ 2026ರಂದು ಶನಿವಾರ ಸಂಜೆ 5-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ಡಾ. ಗಣಪತಿ ಜೋಯಿಸ್ ಪ್ರದಾನ ಮಾಡಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀಕಿರಣ್ ಹೆಬ್ಬಾರ್ ಸಭೆಯ ಅಧ್ಯಕ್ಷತೆ ವಹಿಸಲಿರುವರು. ನಂತರ ಪ್ರಜ್ಞಾ ಅಡಿಗ ಅವರ ರಾಗಂ.. ತಾನಂ.. ಪಲ್ಲವಿ.. ಗಾಯನ ನಡೆಯಲಿದೆ. ಇವರಿಗೆ ವಯೊಲಿನ್ ನಲ್ಲಿ ವೈಭವ ರಮಣಿ ಹಾಗೂ ಮೃದಂಗದಲ್ಲಿ ಪ್ರಜ್ವಲ್ ಭಾರದ್ವಾಜ್ ಸಹಕರಿಸಲಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
