ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದ್ದ 82ನೇ ವರ್ಷದ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ವಾರ್ಷಿಕ ‘ಹವ್ಯಕ ವಿಶೇಷ ಪ್ರಶಸ್ತಿ’ ಮತ್ತು ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು.
ಉದ್ಯಮಿ ಮತ್ತು ಸಮಾಜ ಸೇವಕ ಜಿ.ವಿ. ಭಟ್ ಗೋರೆ ಇವರಿಗೆ ‘ಹವ್ಯಕ ವಿಭೂಷಣ’ ಪ್ರಶಸ್ತಿ, ವಿದ್ವಾಂಸ ಮತ್ತು ಭಾಷಾ ತಜ್ಞರಾದ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ಮತ್ತು ಸಂಶೋಧಕ ಎಸ್.ಎನ್. ಹೆಗಡೆ, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪರಮೇಶ್ವರ ಹೆಗಡೆ ಶಿರಸಿ ಇವರಿಗೆ ‘ಹವ್ಯಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯಾ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ. ದಿಲೀಪ್ ಇವರಿಗೆ ‘ಹವ್ಯಕ ಶ್ರೀ’ ಪ್ರಶಸ್ತಿ, ಹವ್ಯಕ ಮಾಸ ಪತ್ರಿಕೆಯ ನಿರ್ದೇಶಕ ಹಾಗೂ ಸಂಚಾಲಕ ನಾರಾಯಣ ಭಟ್ ಹುಳೇಗಾರು ‘ಹವ್ಯಕ ಸೇವಾ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಪಲ್ಲವ’ ಪ್ರಶಸ್ತಿಯನ್ನು ನೀಡಲಾಯಿತು. ನಿವೃತ್ತ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್, ಕಿರುತರೆ ನಿರ್ದೇಶಕ ಬ.ಲ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.