ಮಂಗಳೂರು : ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ 9ರಿಂದ 17 ವರ್ಷದ ಮಕ್ಕಳಿಗೆ ಹತ್ತು ದಿನಗಳ ‘ಅರಳು 2025’ ವೃತ್ತಿಪರ ರಂಗಭೂಮಿ ಕಾರ್ಯಾಗಾರವನ್ನು ದಿನಾಂಕ 16 ಏಪ್ರಿಲ್ 2025ರಿಂದ 27 ಏಪ್ರಿಲ್ 2025ರವರೆಗೆ ಪ್ರತಿದಿನ ಬೆಳಗ್ಗೆ 9-00 ಗಂಟೆಯಿಂದ ಸಂಜೆ 5-00 ಗಂಟೆ ತನಕ ಕೊಡಿಯಾಲ್ ಬೈಲಿನ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಮಂಗಳೂರಿನ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 8431631998 ಮತ್ತು 7338226936 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.