ಸುರತ್ಕಲ್: ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮ ದಿನಾಂಕ 12 ಮಾರ್ಚ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ತೃತೀಯ ಬಿ. ಎ. ವಿದ್ಯಾರ್ಥಿನಿ ಧನುಶ್ರೀ ಇವರು ಕುಂ. ವೀರಭದ್ರಪ್ಪ ಬರೆದ ಚಾಪ್ಲಿನ್ (ಜೀವನ ಮತ್ತು ಸಾಧನೆ) ಎಂಬ ಪುಸ್ತಕವನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಇವರು ಧನುಶ್ರೀ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ., ಪ್ರಾಧ್ಯಾಪಕರುಗಳಾದ ಡಾ.ಸುಧಾ ಯು., ಡಾ. ವಿಜಯಲಕ್ಷ್ಮೀ, ಡಾ. ಸಂತೋಷ್ ಆಳ್ವ, ಕಿಟ್ಟು, ಹಾಗೂ ಗ್ರಂಥಪಾಲಕಿ ಡಾ. ಸುಜಾತಾ ಬಿ., ಉಪಸ್ಥಿತರಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಮೇಘ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮ
No Comments1 Min Read
Previous Articleರಂಗಶಾಲ ಪ್ರಸ್ತುತಪಡಿಸುವ ‘ಮಿಸ್ ಅಂಡರ್ ಸ್ಟ್ಯಾಂಡಿಂಗ್’ ಹಾಸ್ಯ ನಾಟಕ | ಮಾರ್ಚ್ 14, 15, ಮತ್ತು 16
Next Article ಗೋವಾದಲ್ಲಿ ಮೇಳೈಸಿದ ‘ಯಕ್ಷ ಶರಧಿ’