ಮೈಸೂರು : ಆತ್ಮೀಯ ಗೆಳೆಯರೇ, ಪೋಷಕರೇ, ಪುಟಾಣಿಗಳೇ ನಿಮ್ಮೆಲ್ಲರ ತುಂಬು ಹೃದಯದ ಸಹಕಾರ, ಪ್ರೀತಿ, ರಂಗ ಕಾಳಜಿ ಮತ್ತು ಎಲ್ಲಕ್ಕಿಂತ ಮುಖ್ಯ ನೀವು ನಮ್ಮ ‘ಶ್ರೀಗುರು ಕಲಾ ಶಾಲೆ’ಯ ಮೇಲಿಟ್ಟಿದ್ದ ನಂಬಿಕೆ ಮತ್ತು ವಿಶ್ವಾಸಗಳಿಂದ ಕಳೆದ ವರ್ಷ ನಾವು ಆರಂಭಿಸಿದ ಮಕ್ಕಳ ಬೇಸಿಗೆ ಶಿಬಿರ “ಪುಟಾಣಿ ಪರ್ ಪಂಚ” ನಿಮ್ಮನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂಬ ಹೆಮ್ಮೆಯ ಭಾವನೆ ನಮ್ಮಲ್ಲಿ ಮೂಡಿದೆ. ಅದಕ್ಕೆಲ್ಲ ಕಾರಣ ನೀವು…. ನೀವು ಮತ್ತು ನೀವು. ನಮ್ಮ ಶ್ರೀಗುರು ಕಲಾ ಶಾಲೆಯ ಉದ್ದೇಶವಾದರೂ ಅಷ್ಟೇ….ಮುಖ್ಯವಾಗಿ ರಂಗಭೂಮಿಯ ಮೂಲಕ ಮಕ್ಕಳನ್ನು ತಲುಪುವುದು. ಆ ನಿಟ್ಟಿನಲ್ಲಿ ನಮ್ಮ ರಂಗ ಚಟುವಟಿಕೆಗಳು ಮತ್ತು ವಿವಿಧ ಕಾರ್ಯಕ್ರಮಗಳು ನಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ನಾವು ನಮ್ಮ ಹಿರಿಯರಿಂದ ಕಲಿತದ್ದನ್ನು ಮಕ್ಕಳಿಗೆ ಕಲಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ ಇದೆಲ್ಲ. ನಮ್ಮ ಕಲಾ ಶಾಲೆ ನಡೆಸುವ ರಂಗ ತರಬೇತಿ ಶಿಬಿರಗಳಿಗೆ ಮತ್ತು ಸಂಗೀತ ಕಲಿಕೆಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ‘ಪುಟಾಣಿ ಪರ್ ಪಂಚ’ಕ್ಕೂ ನೀಡಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದರ ಜೊತೆ ನಮ್ಮ ಜೊತೆ ಸತತವಾಗಿ ದೊಡ್ಡ ಬೆಂಬಲವಾಗಿ ನಿಂತಿದ್ದೀರಿ. ಇದೇ ರೀತಿಯ ಸಹಕಾರ, ಪ್ರೀತಿ, ಶುಭ ಹಾರೈಕೆಗಳು ನಮಗೆ ಈ ವರ್ಷವೂ ನಿಮ್ಮಿಂದ ಬೇಕಿದೆ, ಮತ್ತೆ ನಿಮ್ಮತ್ತ ಬರುತ್ತಿದ್ದೇವೆ. ‘ಪುಟಾಣಿ ಪರ್ ಪಂಚ – 2024’ ಮಕ್ಕಳ ಬೇಸಿಗೆ ಶಿಬಿರವು 7ರಿಂದ 14 ವರ್ಷದ ಮಕ್ಕಳಿಗೆ ದಿನಾಂಕ 01-04-2024ರಿಂದ 28-04-2024ರವರೆಗೆ ಬೆಳಿಗ್ಗೆ 10-30ರಿಂದ ಸಂಜೆ 4-00 ಗಂಟೆವರೆಗೆ ಮೈಸೂರಿನ ಕುವೆಂಪುನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯುತ್ತದೆ. ಒಂದು ತಿಂಗಳು ನಿಮ್ಮ ಮಕ್ಕಳನ್ನು ಸಾಂಸ್ಕೃತಿಕವಾಗಿ ಜಾಗೃತಗೊಳಿಸಿ, ತಿದ್ದಿ ತೀಡಿ ಒಂದು ಸುಂದರ ಕಲಾಮೂರ್ತಿಯನ್ನಾಗಿಸಿ ಮನೆಗೆ ಕಳುಹಿಸುವುದು ನಮ್ಮ ಸಂಕಲ್ಪವಾಗಿದೆ. ನಿಮ್ಮ ಮಕ್ಕಳ ಒಂದು ತಿಂಗಳ ಪ್ರಯಾಣ ನಮ್ಮ ಜೊತೆ ಆನಂದಮಯವಾಗಿರುತ್ತದೆ ಎಂಬ ಭರವಸೆಯನ್ನು ಶ್ರೀಗುರು ಕಲಾ ಶಾಲೆ ನೀಡುತ್ತದೆ. ಬನ್ನಿ ಮಕ್ಕಳೇ ‘ಪುಟಾಣಿ ಪರ್ ಪಂಚ’ದ ಒಳಗೆ ಬೇಗನೆ ಓಡಿ ಬನ್ನಿ… ಕುಣಿಯೋಣ, ನಲಿಯೋಣ, ಬೇಸರ ಮರೆಯೋಣ, ನಗೋಣ, ನಗಿಸೋಣ.
ಶಿಬಿರದಲ್ಲಿ ನಾಟಕ, ರಂಗಾಟಗಳು, ಚಿತ್ರಕಲೆ, ಕರಕುಶಲ ಕಲೆಗಳು, ಸಾಧಕರೊಂದಿಗೆ ಸಂವಾದ, ಪ್ರಯೋಗ ಗಣಿತ, ಜಾನಪದ ನೃತ್ಯ ವಿಜ್ಞಾನ ವಿಸ್ಮಯ, ಪ್ರಕೃತಿ ವೀಕ್ಷಣೆ, ಸ್ಕ್ರಿಪ್ಟ್ ಬರವಣಿಗೆ, ಲಯ ವಿನ್ಯಾಸ, ಕೌಶಲ್ಯ ಅಭಿವೃದ್ಧಿ, ರಸ್ತೆ ನಿಯಮ, ಶಾಸ್ತ್ರೀಯ ನೃತ್ಯದ ಪರಿಚಯ, ಸಂಗೀತ, ದೇಹ ಭಾಷೆ, ಯೋಗ, ಧ್ಯಾನ, ಪ್ರಾಣಾಯಾಮಗಳಿವೆ. ಹೆಚ್ಚಿನ ಮಾಹಿತಿಗಾಗಿ 9980794690 ಮತ್ತು 9481818042 ಇವರನ್ನು ಸಂಪರ್ಕಿಸಿರಿ.