ಸುರತ್ಕಲ್ : ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ ಇದರ ಸದಸ್ಯರಿಂದ ‘ರಾಜ ದಂಡಕ’ ಪ್ರಸಂಗದ ಯಕ್ಷಗಾನ ಬಯಲಾಟವು ನವರಾತಿ ಮಹೋತ್ಸವದ ಪ್ರಯುಕ್ತ ಸುರತ್ಕಲ್ ಇಲ್ಲಿನ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ದಿನಾಂಕ 03 ಅಕ್ಟೋಬರ್ 2024 ರಂದು ನಡೆಯಿತು .
ಶ್ರೀ ದಿನಕರ ಪಚ್ಚನಾಡಿ ಇವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಬೊಂದೆಲ್, ಹರಿಪ್ರಸಾದ ಕಾರಂತ, ಸೂರಜ್ ಆಚಾರ್ಯ ಮೂಲ್ಕಿ, ಜಯರಾಮ ಆಚಾರ್ಯ ಚೇಳಾಯ್ರು ಹಾಗೂ ಮಾಧವ ಮಯ್ಯ ಸಹಕರಿಸಿದರು.
ಮುಮ್ಮೇಳದಲ್ಲಿ ವೇದವ್ಯಾಸ ರಾವ್ ಕುತ್ತೆತ್ತೂರು, ವಿನೋದ್ ಕುತ್ತೆತ್ತೂರು, ನಂದಪ್ರಸಾದ್, ಕಾರುಣ್ಯನಿಧಿ, ಶ್ರೀನಿಧಿ, ಪ್ರಜ್ವಲ್ ಐತಾಳ್ ಕುಳಾಯಿ, ಶ್ರೀ ವಾಸುದೇವ ಆಚಾರ್ಯ, ಶ್ರೀರಂಜಿತ್, ದಿವಾಕರ ಕುಳಾಯಿ, ಹೃಷಿಕೇಶ ಹೆಬ್ಬಾರ್, ಅದ್ವೈತ್ ಮಯ್ಯ, ಸಚಿನ್ ಪೂಜಾರಿ, ವಿಘ್ನೇಶ್, ರಾಘವೇಂದ್ರ ಹೆಬ್ಬಾರ್ ಹಾಗೂ ಗುರುಪ್ರಸಾದ್ ಕಾರಂತ ಸಾರಪಾಡಿ ಪಾತ್ರಗಳನ್ನು ನಿರ್ವಹಿಸಿದರು.


 
									 
					