ಕಾಸರಗೋಡು: ರಂಗ ಚಿನ್ನಾರಿಯ 17ನೆಯ ವಾಷಿ೯ಕೋತ್ಸವವು ನಾರಿಚಿನ್ನಾರಿಯ ಸಹಯೋಗದೊಂದಿಗೆ ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿಯ ಸಭಾಂಗಣದಲ್ಲಿ 20-05 2023 ರಂದು ಅಥ೯ಪೂಣ೯ವಾಗಿ ಜರಗಿತು.
ನಾರಿಚಿನ್ನಾರಿಯ ಸದಸ್ಯೆಯರಾದ ಉಷಾ ರಾಮ್, ಗೀತಾ ಭಟ್ ಹಾಗೂ ವಿಜಯಲಕ್ಷ್ಮೀ ಶಾನುಭೋಗರ ಪ್ರಾಥ೯ನೆಯೊಂದಿಗೆ ಆರಂಭವಾದ ಕಾಯ೯ಕ್ರಮವನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಂಗಚಿನ್ನಾರಿಯ ಅಧ್ಯಕ್ಷ ರಾದ ಕಾಸರಗೋಡು ಚಿನ್ನಾ ಅವರು ಸಂಘಟನೆಯ ಹುಟ್ಟು ಮತ್ತು ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನು ಆಡಿ ಮುಂದಿನ ಯೋಜನೆಗಳ ಕುರಿತು ತಮ್ಮ ಕನಸನ್ನು ಬಿಚ್ಚಿಟ್ಟರು.
ರಂಗಚಿನ್ನಾರಿಯ ಶ್ರೀ ಕೇಶವಾನಂದ ಪ್ರಶಸ್ತಿಗೆ ಭಾಜನರಾದ ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟ ರನ್ನು ಶಾಸಕ ಪ್ರತಾಪಸಿಂಹನಾಯಕ್ ಪೇಟತೊಡಿಸಿ,ಹಾರ,ಫಲ ತಾಂಬೂಲ, ಸ್ಮರಣಿಕೆ ನಗದು ನೀಡಿ ಗೌರವಿಸಿದರು.ಹಾಗೆಯೇ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಠಲ ಗಟ್ಟಿ ಉಳಿಯ ಮತ್ತು ಗಮಕ ಹಾಗೂ ಮಹಿಳಾ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಜಯಲಕ್ಷ್ಮೀ ಕಾರಂತರನ್ನು ಸನ್ಮಾನಿಸಿದರು. ರಂಗಚಿನ್ನಾರಿ ಯುವ ಪ್ರಶಸ್ತಿಯನ್ನು ಜಾನಪದ ಕ್ಷೇತ್ರದಲ್ಲಿ ಪ್ರತಿಭೆಯನ್ನು ಮೆರೆಯುತ್ತಿರುವ ಸುಜಿತ್ ಕುಮಾರ್ ಅವರಿಗೂ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನು ಮಾಡುತ್ತಿರುವ ಬಹುಮುಖ ಪ್ರತಿಭೆ ಮೇಧಾಕಾಮತ್ ಅವರಿಗೂ ಪ್ರದಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿ ಭಾಜನರಾದ ಪ್ರತಿಯೊಬ್ಬರಿಗೂ ನಗದು ಬಹುಮಾನವನ್ನಿತ್ತು ಪ್ರೋತ್ಸಾಹಿಸಲಾಯಿತು. ಪ್ರಶಸ್ತಿ ವಿಜೇತರ ಪರಿಚಯವನ್ನು ಅನುಕ್ರಮವಾಗಿ ವೀಣಾ ಶೆಟ್ಟಿ, ಬಬಿತಾ,ಸವ೯ಮಂಗಳಾ,ಪ್ರಮೀಳಾ ಚುಳ್ಳಿಕ್ಕಾನ, ಹಾಗೂ ಶ್ರೀ ಲತಾ ಮೈಲಾಟ್ಟಿ ನೆರವೇರಿಸಿದರು. ಡಾ. ನಾ ದಾಮೋದರ ಶೆಟ್ಟಿ ತಮ್ಮ ಅಭಿನಂದನಾ ಭಾಷಣದಲ್ಲಿ ಹಿರಿಯ ಸಾಧಕರ ಕೊಡುಗೆಗಳನ್ನು ಕೊಂಡಾಡುವುದರೊಂದಿಗೆ ಯುವ ಪ್ರತಿಭೆಗಳಿಗೆ ಭವ್ಯ ಭವಿಷ್ಯವನ್ನು ಹಾರೈಸಿದರು. ಪ್ರಶಸ್ತಿ ವಿಜೇತರು ಮಾತನಾಡಿ ರಂಗಚಿನ್ನಾರಿಗೆ ಋಣಭಾರವನ್ನು ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಡಾ. ರೋಹಿಣಿ ಅಯ್ಯರ್ ಅವರ ಕಾದಂಬರಿ ‘ಸಾಕ್ಷಿ’ ಯನ್ನು ಅನಾರೋಗ್ಯ ದಿಂದಿರುವ ಅವರ ಅನುಪಸ್ಥಿತಿಯಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಅನಾವರಣಗೊಳಿಸಿದರು .ಇದರ ಮೊದಲ ಪ್ರತಿಯನ್ನು ರೋಹಿಣಿ ಅಯ್ಯರ್ ಅವರ ಆಪ್ತ ಸಹಾಯಕಿ ಗಿರಿಜಾ ಚಂದ್ರನ್ ಸ್ವೀಕರಿಸಿದರು. ಲಂಡನ್ ನಲ್ಲಿ ವೈದ್ಯರಾಗಿರುವ ರೋಹಿಣಿ ಯವರ ಪುತ್ರಿ ರೆಮಾ ಅಯ್ಯರ್ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಎಡನೀರು ಮಠದ ಮೆನೇಜರ್ ರಾಜೇಂದ್ರ ಕಲ್ಲೂರಾಯ, ನಿವೃತ್ತ ಅಧ್ಯಾಪಕ ಮಾಧವ ಹೇರಳ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಡ್ರಮ್ ಕಲಾವಿದ ಗಣೇಶ ಕುಂಬಳೆ ಶುಭ ಹಾರೈಸಿ ಮಾತನಾಡಿದರು. ಪ್ರತಾಪ ಸಿಂಹ ನಾಯಕ್ ಅವರು ತಮ್ಮ ಭಾಷಣದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಪರಂಪರೆಯ ಕೇರಳದ ಎಡ ನೀರಿನಲ್ಲಿ ಕಾಯ೯ಕ್ರಮ ನಡೆದ ಬಗ್ಗೆ ಸಂತೋಷ ವನ್ನು ವ್ಯಕ್ತಪಡಿಸಿ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಸಾಧಕರನ್ನು ಗೌರವಿಸಿ ಅಭಿನಂದಿಸಿದ ಕಾಯ೯ವು ಧನ್ಯತೆಯನ್ನು ನೀಡಿದೆ ಎಂದರು. ಚಿನ್ನಾ ಅವರ ನೇತೃತ್ವದ ರಂಗಚಿನ್ನಾರಿಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭಕೋರಿದರು. ಹಿರಿಯ ನೇತ್ರ ತಜ್ಞ ಅನಂತ ಕಾಮತ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಸರಗೋಡು ಚಿನ್ನಾ ಅವರು ಸ್ವಾಗತಿಸಿ ಕಾಯ೯ಕ್ರಮವನ್ನು ನಿರೂಪಿಸಿದರು. ಕೋಳಾರು ಸತೀಶ್ ಚಂದ್ರ ಭಂಡಾರಿ ಯವರು ಧನ್ಯವಾದವಿತ್ತರು. ಸತ್ಯ ನಾರಾಯಣ ಕೆ ಹಾಗೂ ಮನೋಹರ ಶೆಟ್ಟಿ. ಹಾಗೂ ನಾರಿಚಿನ್ನಾರಿಯ ಸದಸ್ಯರು ಸಹಕಾರ ವಿತ್ತರು.ಸಭಾಕಾಯ೯ಕ್ರಮದ ಬಳಿಕ ಕಿಶೋರ್ ಪೆಲ೯ಅವರಿಂದ ಸುಶ್ರಾವ್ಯವಾದ ಗಾಯನ ನಡೆಯಿತು. ಲವಕುಮಾರ ಐಲ ಹಾಗೂ ಸತ್ಯ ನಾರಾಯಣ ಐಲ ವಾದ್ಯ ಸಹಕಾರ ನೀಡಿದರು. ಆ ನಂತರ ನೃತ್ಯ ನಿಕೇತನ ಕೊಡವೂರು ತಂಡದ ನಾಟ್ಯ ವಿದುಷಿ ಮಾನಸಿ ಸುಧೀರ್ ಮತ್ತು ಬಳಗದಿಂದ ಸುಧೀರ್ ರಾವ್ ಅವರ ನಿದೇ೯ಶನದಲ್ಲಿ ನಡೆದ ನಡೆದ ನೃತ್ಯ ಪ್ರದರ್ಶನವು ಅದ್ಭುತ ವಾಗಿದ್ದು ಜನಮನಸೂರೆಗೊಂಡಿತು. ರಂಗಚಿನ್ನಾರಿಯ 17ನೆಯ ವಾಷಿ೯ಕೋತ್ಸವವು ಅವಿಸ್ಮರಣೀಯವಾಗಿ ಸಂಪನ್ನ ಗೊಂಡಿತು.