ಉಡುಪಿ : ರಾಗ ಧನ ಉಡುಪಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ರಾಗರತ್ನಮಾಲಿಕೆ -12’ನೆಯ ಗೃಹ ಸಂಗೀತ ಕಛೇರಿ ಉಡುಪಿಯ ಶ್ರೀ ಕೆ. ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 12-05-2023ರಂದು ಸಂಜೆ 4-30ಕ್ಕೆ ಅವರ ಸ್ವಗೃಹ ‘ಉಷಾ ನಿಲಯ’ದಲ್ಲಿ ನಡೆಯಲಿದೆ.
ಮೈಸೂರಿನ ಶ್ರೀ ಎ. ಚಂದನ ಕುಮಾರ್ ಕೊಳಲು ವಾದನದಲ್ಲಿ, ಮತ್ತೂರು ಶ್ರೀನಿಧಿ ವಯೊಲಿನ್ ನಲ್ಲಿ, ಮೃದಂಗದಲ್ಲಿ ಶ್ರೀ ಅನಿರುದ್ಧ್ ಎಸ್. ಭಟ್ ಹಾಗೂ ಶ್ರೀ ಸುನಾದ ಆನೂರು ಖಂಜೀರದಲ್ಲಿ ಈ ಕಛೇರಿಯನ್ನು ನಡೆಸಿಕೊಡಲಿರುವರು.
ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.