ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 40’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ದಿನಾಂಕ 22 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇರಳದ ಭಾರದ್ವಾಜ್ ಸುಬ್ರಹ್ಮಣ್ಯ ಇವರ ಹಾಡುಗಾರಿಕೆಗೆ ವಯೋಲಿನ್ ನಲ್ಲಿ ಚೆನೈಯ ಭಾರ್ಗವ ವಿಘ್ನೇಶ್ ಹಾಗೂ ಮೃದಂಗದಲ್ಲಿ ಉಡುಪಿಯ ಡಾ. ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.