ಧಾರವಾಡ : 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿಗೆ ಶ್ರೀ ಪ್ರಕಾಶ್ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಮತ್ತು ಶ್ರೀ ಮಂಜುನಾಥ್ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾಸಂಕಲನಗಳ ಹಸ್ತಪ್ರತಿಗಳು ಆಯ್ಕೆಯಾಗಿವೆ. ಈ ಪ್ರಶಸ್ತಿಯು ರೂಪಾಯಿ 20,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ.
ಈ ಬಾರಿ 50ಕ್ಕೂ ಅಧಿಕ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಒಟ್ಟು ಆರು ಹಸ್ತಪ್ರತಿಗಳಿದ್ದವು. ಖ್ಯಾತ ವಿಮರ್ಶಕಿ ಡಾ. ಮಹೇಶ್ವರಿ ಯು. (ಕಾಸರಗೋಡು) ಮತ್ತು ಖ್ಯಾತ ಕಥೆಗಾರ್ತಿ ಶ್ರೀಮತಿ ಮಿತ್ರಾ ವೆಂಕಟರಾಜ್ (ಮುಂಬಯಿ) ಅವರು ತೀರ್ಪುಗಾರರಾಗಿದ್ದರು. ಎಪ್ರಿಲ್ ತಿಂಗಳ ಮೂರನೆಯ ವಾರ ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಕಾಶ್ ಪುಟ್ಟಪ್ಪ ತಮ್ಮ ಚೊಚ್ಚಲ ಕಥಾಸಂಕಲನ ಮತ್ತು ಮಂಜುನಾಥ್ ಕುಣಿಗಲ್ ತಮ್ಮ ಎರಡನೆಯ ಕಥಾಸಂಕಲನಕ್ಕೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪಡೆದಿದ್ದಾರೆ.

