ಬೆಂಗಳೂರು: ಸ್ಪಷ್ಟ ಥಿಯೇಟರ್ ಪ್ರಸ್ತುತಪಡಿಸುವ ಗಿರೀಶ್ ಕಾರ್ನಾಡ್ ರವರ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನವು ನಿರ್ದೇಶಕ ಗಗನ್ ಪ್ರಸಾದ್ ರವರ ನಿರ್ದೇಶನದಲ್ಲಿ ದಿನಾಂಕ 13-05-2023 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಗೂ 17-06-2023 ರಂದು ರವೀಂದ್ರ ಕಲಾ ಕ್ಷೇತ್ರ ದಲ್ಲಿ ಪ್ರದರ್ಶನಗೊಳ್ಳಲಿದೆ
ರಾಕ್ಷಸ ತಂಗಡಿ
1565 ರಲ್ಲಿ ಬಹಮನಿ ಸಾಮ್ರಾಜ್ಯದ ಡೆಕ್ಕನ್ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವಿನ ‘ರಾಕ್ಷಸ ತಂಗಡಿ’ ಯುದ್ಧವನ್ನು ಸೆರೆಹಿಡಿಯುತ್ತದೆ. ಇದು ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ನಕ್ಷೆಯ ಮೇಲೆ ಪ್ರಭಾವ ಬೀರಿತು. ಈಗಿನ ಬಿಜಾಪುರದಲ್ಲಿ ರಕ್ಕಸಗಿ ಮತ್ತು ತಂಗಡಗಿ ಎಂಬ ಎರಡು ಪ್ರದೇಶಗಳಲ್ಲಿ ಈ ಯುದ್ಧ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ.
ಕೃಷ್ಣಾ ನದಿಯನ್ನು ಕೆಂಪು ಬಣ್ಣಕ್ಕೆ ತಿರುಗಿಸಿ ಹಂಪಿಯ ಸ್ಮಾರಕಗಳನ್ನು ಕೆಡವಿದ ನಂತರ ಈ ಯುದ್ಧವನ್ನು ಮರುಪರಿಶೀಲಿಸಿದಾಗ, ಕೈಗೊಂಬೆ ರಾಜ ಮತ್ತು ವಿಜಯನಗರದ ಶಾಸಕ ಅಳಿಯ ರಾಮರಾಯನ ಸಹೋದರರು ಅಸಹಾಯಕರಾಗಿ ಕಾಣುತ್ತಿದ್ದರೆ – ವಿಜಯನಗರವು ದ್ವಂಸಗೊಂಡಿದ್ದನ್ನು ನೋಡಬಹುದು ಮತ್ತು ಇದು ದೊರೆಗಳ ಗಗನಕ್ಕೇರುವ ಮಹತ್ವಾಕಾಂಕ್ಷೆಯ ನಡುವೆ; ಕತ್ತಿಗಳು ಪರಸ್ಪರ ವಿರುದ್ಧವಾಗಿ ಬೀಗಹಾಕಲ್ಪಟ್ಟವು, ಫಿರಂಗಿಗಳನ್ನು ತುಂಬಿಸಿ ಸ್ಪೋಟಿಸಲಾಯಿತು , ದಳವಾಯಿಗಳು , ಸರದಾರರು ತಮ್ಮ ಸೈನ್ಯದೊಂದಿಗೆ ನಿರ್ಭಯವಾಗಿ ಸಾಗಿದರು.
ಹಂತ ಹಂತವಾಗಿ ಯುದ್ಧ ನಡೆದು ಯುದ್ಧ ಅನಿವಾರ್ಯವಾ ಅದರ ಬೆಲೆ ಸುರಿಸುವ ರಕ್ತಕ್ಕೂ ಮತ್ತು ಮನಸ್ಸಿನ ಶಾಂತಿಗೂ ದೊಡ್ಡದೇನು ಎಂಬ ದೃಷ್ಟಿಕೋನವನ್ನು ಕಟ್ಟಿಕೊಡುತ್ತದೆ.
ನಿರ್ದೇಶಕರ ಬಗ್ಗೆ
ಬೆಂಗಳೂರಿನ ಹಲವಾರು ಹವ್ಯಾಸಿ ರಂಗತಂಡಗಳ ಜೊತೆಗೆ ಕೆಲಸ ಮಾಡುತ್ತಾ ಶ್ರೀ ಗಗನ್ ಪ್ರಸಾದ್ ಸುಮಾರು 5 ರಂಗನಾಟಕಗಳನ್ನು ಮತ್ತು 10 ಬೀದಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಬಿ.ಇ ಪದವಿಯನ್ನು ಪಡೆದ ಇವರು ಸ್ಪಷ್ಟ ರಂಗತಂಡ ಸ್ಥಾಪನಕರ್ತರು ಮತ್ತು ಅದರ ನಿರ್ದೇಶಕರು. ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಿಂದ ಪ್ರದರ್ಶನ ಕಲೆಯಲ್ಲಿ ಡಿಪ್ಲೋಮ ಪದವಿಯನ್ನು ಹೊಂದಿದ್ದಾರೆ. ಐಟಿ ಉದ್ಯೋಗದಲ್ಲಿ ಇದ್ದು ಶನಿವಾರ ಮತ್ತು ಬಾನುವಾರದ ಸಮಯದಲ್ಲಿ ಆಸಕ್ತಿ ಉಳ್ಳವರನ್ನ ಕಟ್ಟಿಕೊಂಡು ಅವರಿಗೆ ತರಬೇತಿಯನ್ನು ನೀಡುತ್ತಾ ನಾಟಕಗಳ ತಾಲೀಮನ್ನು ಮಾಡುತ್ತಾರೆ. ಇವರ ಇತ್ತೀಚಿನ ನಾಟಕ ಶ್ರೀ ಗಿರೀಶ್ ಕರ್ನಾಡ್ ರವರು ರಚಿಸಿರುವ ರಾಕ್ಷಸ ತಂಗಡಿ.
ಮಕ್ಕಳಿಗೆ ರಂಗಭೂಮಿಯನ್ನು ಪರಿಚಯಿಸುವ ದೃಷ್ಟಿಕೋನ ಇಟ್ಟಿಕೊಂಡಿರುವ ಇವರು ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ಮಕ್ಕಳಿಗಾಗಿ ರಂಗಭೂಮಿ ಪಠ್ಯಕ್ರಮವನ್ನು ವಿನ್ಯಾಸ ಮಾಡಿ ಕೆಲುವು ರಂಗಭೂಮಿ ಶಿಕ್ಷಕರೊಡನೆ ಶಾಲೆಗಳಲ್ಲಿ ಕಾರ್ಯಗತಗೊಳಿಸಿದ್ದಾರೆ.
ಇವರ ನಿರ್ದೇಶಿಸಿದ ನಾಟಕಗಳು – ತರ್ಲೆ ತಿಪ್ಪಣ್ಣ, ನೀನಾನಾದರೆ ನಾನೀನೇನ , ರೂಬಿಕ್ಸ್ ಕ್ಯೂಬ್ ಮತ್ತು ಮುಂತಾದವು