Subscribe to Updates

    Get the latest creative news from FooBar about art, design and business.

    What's Hot

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026

    ಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ವಿಶ್ವ ಸಂಗೀತ ದಿನಾಚರಣೆ | ಜೂನ್ 20 ಮತ್ತು 21

    June 18, 2026

    ಬೆಂಗಳೂರಿನ ನಾಣಿ ಅಂಗಳದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 21

    June 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ಸಾಧಕ’ ಪ್ರಶಸ್ತಿ ಪ್ರದಾನ  
    Awards

    ಉಡುಪಿಯಲ್ಲಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ಸಾಧಕ’ ಪ್ರಶಸ್ತಿ ಪ್ರದಾನ  

    August 16, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಯಿಂದ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್‌ ಅವರ ಸಹಕಾರದೊಂದಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮೇರು ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ಪ್ರದಾನ ಮಾಡಲಾಯಿತು.

    ಅಜ್ಜರಕಾಡಿನ ಪುರಭವನದಲ್ಲಿ ದಿನಾಂಕ 12-08-2023ರಂದು ನಡೆದ ಈ ಪ್ರಶಸ್ತಿ ಪ್ರದಾನ ಸಂಮಾರಂಭಕ್ಕೆ ಮಾಹೆಯ ಕುಲಪತಿಗಳಾದ ಡಾ. ಎಂ.ಡಿ ವೆಂಕಟೇಶ್ ಅವರು ಚೆಂಡೆ ವಾದನದ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ ‘ಯಕ್ಷಗಾನ ಎಂಬುದು ಒಂದು ಕಲೆ . ಇದು ಕರಾವಳಿ ಭಾಗದ ಸಾಂಸ್ಕೃತಿಕ ಪ್ರತೀಕವಾಗಿದೆ ಹಾಗೂ ಈಗಲೂ ಸಹ ಜನರ ಪ್ರೋತ್ಸಾಹ ಬೆಂಬಲದಿಂದ ಕಲೆ ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗಿದೆ” ಎಂದರು. ಸಮ್ಮಾನ ಸ್ವೀಕರಿಸಿದ ಕೊಂಡದಕುಳಿ ಅವರು ಯಕ್ಷಗಾನ ಕಲೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಾ “ಕಲಾವಿದರು ನಾವು ಯಕ್ಷಗಾನದಿಂದ ಏನನ್ನು ಪಡೆಯುತ್ತೇವೋ ಅದರಲ್ಲಿ ಒಂದು ಭಾಗವನ್ನು ಕಲೆಯ ಬೆಳವಣಿಗೆಗೆ ಹಾಗೂ ಹಿಂತಿರುಗಿಸಿದರೆ ಆಗ ನಾವು ಸಮಾಜದ ಋಣವನ್ನು ತೀರಿಸಿದಂತಾಗುತ್ತದೆ” ಎಂದರು.

    ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಹಾಗೂ ಬೇಳಂಜೆ ಸಂಜೀವ ಹೆಗ್ಡೆ, ಟ್ರಸ್ಟಿನ ವಿಶ್ವಸ್ಥ ಡಾ.ಎಚ್.ಎಸ್. ಬಲ್ಲಾಳ್ ಬಾಳೆ ಅವರು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಟ್ರಸ್ಟ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದ್ದಲ್ಲದೆ ಮಾಹೆಯ ವತಿಯಿಂದಲೂ ಯಕ್ಷಗಾನ ಕಲೆಯ ಬೆಳವಣಿಗೆಗೆ ಹೆಚ್ಚಿನ ನೆರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ಜಿ.ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಜ್ವಲ್ ಡೆವಲಪರ್ಸ್ ನ ಎಂ.ಡಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ, ಪಳ್ಳಿ ಕಿಶನ್ ಹೆಗ್ಡೆ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು, ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ ನಿರೂಪಿಸಿದರು. ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಪೂರ್ವ ರಂಗ ನಡೆಸಿಕೊಟ್ಟರು. ಕಲಾವಿದರ ಅಭಿನಂದನೆಯ ನಂತರ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಳುವಂಗಡ ಕಾವೇರಿ ಉದಯ ಇವರ ಪ್ರತಿಭೆಯನ್ನರಸಿ ಬಂದ ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ’
    Next Article ಮಂಗಳೂರಿನಲ್ಲಿ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮ
    roovari

    Add Comment Cancel Reply


    Related Posts

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026

    ರಾಜ್ಯದ ಹತ್ತು ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ

    June 17, 2026

    ಮಾಹೆಯಿಂದ ಯಕ್ಷಗಾನ ಕಲಾರಂಗಕ್ಕೆ ಮನೆಗಳ ಕೊಡುಗೆ

    June 17, 2026

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ | ಜೂನ್ 21

    June 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.