ಮಂಗಳೂರು: ಸಂಗೀತ ಕ್ಷೇತ್ರದ ಯುವ ಪ್ರತಿಭೆ, ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಯುವ ಗಾಯಕಿ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ರಾಮಂ ಭಜೇ ಜ. 12ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಹನುಮಾನ್ ಚಾಲಿಸ್ ಸೇರಿದಂತೆ ಹತ್ತು ಹಲವು ಹಾಡುಗಳು, ಕರ್ನಾಟಕ ಸಂಗೀತವನ್ನು ವಿಶ್ವದ ಶ್ರೇಷ್ಠ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ, ಸಾಮಾಜಿಕ ಜಾಲ ತಾಣದಲ್ಲಿ ವೀಕ್ಷಣೆಯಿಂದಲೇ ಖ್ಯಾತಿ ಪಡೆದ ಬಾಲ ಪ್ರತಿಭೆ ಸೂರ್ಯಗಾಯತ್ರಿ ಅವರು ‘ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ’ ಎಂಬ ಪರಿಕಲ್ಪನೆಯೊಂದಿಗೆ ‘ರಾಮಂ ಭಜೇ’ ಎಂಬ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಂಗೀತಾಸಕ್ತರಿಗೆ ಉಚಿತ ಕಾರ್ಯಕ್ರಮವಾಗಿದ್ದು, 15 ನಿಮಿಷದ ಮೊದಲು ಆಸೀನರಾಗಬೇಕಾಗಿ ಸಂಘಟಕರಾದ ಸಂಗೀತ ಭಾರತಿ ಪ್ರತಿಷ್ಠಾನ ಪ್ರಕರಣೆಯಲ್ಲಿ ವಿನಂತಿಸಿದೆ.
ಏಮ್ ಫಾರ್ ಸೇವಾ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯ ಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ.
ಸೂರ್ಯಗಾಯತ್ರಿ ಅವರು ನಾನಾ ಹಾಡುಗಳ ಮೂಲಕ ರಾಮಾರಾಧನೆಯನ್ನು ಮಾಡಲಿದ್ದು, ಇದಕ್ಕೆ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡ ವಿ| ಸುಂದರ ರಾಜನ್ ಅವರು ವೀಣೆ, ವಿ| ಆದರ್ಶ ಅಜಯ್ ಕುಮಾರ್ ಅವರು ವಯೋಲಿನ್, ವಿ| ಪಿ.ವಿ. ಅನಿಲ್ ಕುಮಾರ್ ಅವರು ಮೃದಂಗ, ಪಂ| ಪ್ರಶಾಂತ್ ಶಂಕರ್ ಅವರು ತಬಲ, ಶೈಲೇಶ್ ಮಾರರ್ ಅವರು ತಾಳವಾದ್ಯದಲ್ಲಿ ಸಹಕರಿಸಲಿದ್ದಾಾರೆ. ಗ್ರಾಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡಲು ಬಹು-ಪ್ರಕಾರದ, ಬಹು-ಭಾಷಾ ಸಂಗೀತ ಕಾರ್ಯಕ್ರಮ ಇದಾಗಿದೆ.
Subscribe to Updates
Get the latest creative news from FooBar about art, design and business.
Previous Articleಪುಸ್ತಕ ವಿಮರ್ಶೆ | ತಯ್ಯುಳ್ಳತಿಲ್ ರಾಜನ್ ಇವರ ನಾಟಕ ಕೃತಿ ‘ನಿರ್ವಾಣಂ’