Subscribe to Updates

    Get the latest creative news from FooBar about art, design and business.

    What's Hot

    ಪರಿಚಯ | ಯಕ್ಷ ಪ್ರತಿಭೆಯ ಕಲಾವಲ್ಲರಿ – ಶ್ರುತಿ ಭಟ್ ಮಾರಣಕಟ್ಟೆ

    July 6, 2025

    ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅವಿಭಜಿತ ದ. ಕ. ಜಿಲ್ಲಾ ಅಧ್ಯಕ್ಷರಾಗಿ ಕಲಾಶ್ರೀ ರಾಜಶ್ರೀ ಉಳ್ಳಾಲ್ ಆಯ್ಕೆ

    July 5, 2025

    ಶತಾವಧಾನಿ ಡಾ. ಆರ್. ಗಣೇಶ್ ಇವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

    July 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ತಯ್ಯುಳ್ಳತಿಲ್ ರಾಜನ್ ಇವರ ನಾಟಕ ಕೃತಿ ‘ನಿರ್ವಾಣಂ’
    Article

    ಪುಸ್ತಕ ವಿಮರ್ಶೆ | ತಯ್ಯುಳ್ಳತಿಲ್ ರಾಜನ್ ಇವರ ನಾಟಕ ಕೃತಿ ‘ನಿರ್ವಾಣಂ’

    January 11, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ನಿರ್ವಾಣಂ’ ಮಲೆಯಾಳ ರಂಗಭೂಮಿಯಲ್ಲಿ ನಾಟಕಕಾರರು ಮತ್ತು ನಿರ್ದೇಶಕರಾಗಿ ಬಹಳಷ್ಟು ಕಾಲ ದುಡಿದು ಹೆಸರು ಮಾಡಿದ ತಯ್ಯುಳ್ಳತಿಲ್ ರಾಜನ್ 1982ರಲ್ಲೇ ಬರೆದ ಒಂದು ಪ್ರಭಾವಶಾಲಿ ನಾಟಕ. ‘ರೋಗ, ವಾರ್ಧಕ್ಯ ಮತ್ತು ಸಾವುಗಳಿಗೆ ಪರಿಹಾರ ಹುಡುಕುತ್ತ ಸಿದ್ಧಾರ್ಥನು ಮಾಡಿದ ಪಯಣವು ನಾಟಕಕಾರರಿಗೊಂದು ಸವಾಲೆಸೆಯಬಲ್ಲ ವಸ್ತುವಾಗಿದೆ’ ಎಂಬ ಮಲೆಯಾಳದ ಖ್ಯಾತ ನಾಟಕಕಾರ ಜಿ. ಶಂಕರ ಪಿಳ್ಳೆಯವರ ಮಾತುಗಳಿಂದ ಸ್ಫೂರ್ತಿ ಹೊಂದಿ ಅವರು ಬರೆದ ನಾಟಕ ಇದು.

    ಮೂಲ ಮಲೆಯಾಳದಲ್ಲಿರುವ 29 ಪುಟಗಳ ಈ ನಾಟಕವನ್ನು ಕೇರಳದ ಕೋಝಿಕ್ಕೋಡು ಜಿಲ್ಲೆಯ ವಡಗರದಲ್ಲಿರುವ ಟಿ.ಕೆ. ವಿಜಯ ರಾಘವನ್ ಮತ್ತು ಕೆ.ಪಿ. ಸುನಿಲ್ ಕುಮಾರ್ ಎಂಬವರು ಆಸಕ್ತಿ ವಹಿಸಿ ಐದು ಭಾಷೆಗಳಿಗೆ (ಹಿಂದಿ : ಡಾ. ಹೀನಾ, ಕನ್ನಡ :ಡಾ. ನಾ.ದಾ. ಶೆಟ್ಟಿ, ತಮಿಳು : ಡಾ. ಎಂ. ರಘುರಾಮ್, ಸಂಸ್ಕೃತ : ಎ.ಅ. ಅಮ್ಮಿಣಿ ವರ್ಗೀಸ್, ಇಂಗ್ಲೀಷ್ : ಕೆ.ಪಿ. ಸುನಿಲ್ ಕುಮಾರ್) ಅನುವಾದ ಮಾಡಿಸಿ Nirvana : Hexalingual Edition – A Play by Thayyullathil Rajan ಎಂದು ಪ್ರಕಟಿಸಿದ್ದಾರೆ. ಹೆಸರೇ ಸೂಚಿಸುವಂತೆ ಇದು ಗೌತಮ ಬುದ್ಧನಿಗೆ ಸಂಬಂಧಿಸಿದ ದಂತಕಥೆಗಳಿಗೆ ಕಾಲ್ಪನಿಕ ಸ್ಪರ್ಶ ನೀಡಿ ತನ್ನದೇ ಆದ ಒಂದು ಗುರಿಯನ್ನಿಟ್ಟುಕೊಂಡು ಸಾಗುವ ಒಂದು ನಾಟಕ. ನಾವು ಇತಿಹಾಸದಲ್ಲಿ ಕಾಣುವ ಗೌತಮ ಬುದ್ದನ ಕೆಲವು ಚಹರೆಗಳಷ್ಟೇ ಇಲ್ಲಿ ಇವೆ. ಬುದ್ಧನು ನಿರ್ವಾಣ ಹೊಂದುವ ಹಂತವನ್ನು ತಲುಪುವುದು ಒಂದು ಭಿನ್ನವಾದ ರೀತಿಯಲ್ಲಿ. ಅಂದರೆ ಬೋಧಿವೃಕ್ಷದ ಬುಡದಲ್ಲಿ ಕುಳಿತು ಕಣ್ಣುಮುಚ್ಚಿ ಧ್ಯಾನಿಸುವುದರ ಮೂಲಕ ಅಲ್ಲ. ಅಪಾರ ಜೀವನಾನುಭವವಿದ್ದ ಓರ್ವ ಗುರುಗಳ ಜತೆಗೆ ದೇಶದುದ್ದಕ್ಕೂ ತಿರುಗಾಟ ಮಾಡಿ ಲೋಕಾನುಭವ ಪಡೆದುಕೊಳ್ಳುವುದರ ಮೂಲಕ.

    ಗೌತಮನಿಗೆ ಜತೆಯಾಗಿ ಸಿಗುವ ಗುರುಗಳು ಆತನಿಗೆ ಕುಷ್ಠರೋಗಿಯನ್ನೂ, ಹಣ್ಣು ಮುದುಕನನ್ನೂ, ಸಾವಿನ ಭಯಾನಕ ದೃಶ್ಯವನ್ನೂ ಆರಂಭದಲ್ಲಿ ತೋರಿಸುತ್ತಾರೇನೋ ನಿಜ.‌ ಆದರೆ ಅನಂತರ ಇವೆಲ್ಲಕ್ಕೂ ರೂಪಕವಾಗಿ ನಿಲ್ಲುವ ದೃಶ್ಯಗಳನ್ನೂ ತೋರಿಸುತ್ತಾರೆ. ರಾಜನ ಕೈಕೆಳಗೆ ಕೆಲಸ ಮಾಡುವವರು ಭ್ರಷ್ಟಾಚಾರ ಮಾಡಿ ಲಂಚ ವಸೂಲಿ ಮಾಡಿ ಜನಸಾಮಾನ್ಯರನ್ನು ಶೋಷಿಸುವುದೇ ಕುಷ್ಟಕ್ಕಿಂತಲೂ ಭಯಾನಕವಾದ ರೋಗವೆಂದು ಸಾಬೀತು ಪಡಿಸುತ್ತಾರೆ. ಮುಂದೆ ಸುಂದರಿಯಾದ ಪತ್ನಿಯನ್ನು ಹೊಂದಿದ ಶಕ್ತಿಶಾಲಿಯಾದ ಗಂಡ ಚಾರುದತ್ತ ತನ್ನ ಹೆಂಡತಿಯನ್ನು ಮೇಲಧಿಕಾರಿಯಾದ ದೇವದತ್ತ ಕಾಮಿಸಿ ತನ್ನ ಎದುರಿಗೇ ಅವಳನ್ನು ಎಳೆದೊಯ್ದರೂ ಏನೂ ಮಾಡದೆ ಭೀರುವಿನಂತೆ ಸುಮ್ಮನಿರುವುದನ್ನು ವಾರ್ಧಕ್ವೆಂದು ಕರೆಯುತ್ತಾರೆ. ಮೂರನೆಯದಾಗಿ ರೈತರ ಸಂಘಟನೆಯ ನಾಯಕ ಸಂಘಮಿತ್ರನು ರಾಜನು ಕಟ್ಟಿಸುವ ಅಣೆಕಟ್ಟಿನಿಂದಾಗಿ ನದಿಯ ನೀರೆಲ್ಲವೂ ಅವನಿಗೆ ಬೇಕಾದವರ ಪಾಲಾಗಿ ಬಡರೈತರು ನೀರು ಸಿಗದೆ ಕಂಗಾಲಾಗುವ ಪರಿಸ್ಥಿತಿ ಬಂದಾಗ ಅವರನ್ನು ರಾಜನ ವಿರುದ್ಧ ಎತ್ತಿಕಟ್ಟುತ್ತಾನೆ. ಮುಷ್ಕರ ಹೂಡಿಸುತ್ತಾನೆ. ಆದರೆ ಕೊನೆಗೆ ರಾಜನೊಂದಿಗೆ ಅವನಿಂದ ಒಂದು ಉಡುಗೊರೆ ಪಡೆಯುವುದರ ಮೂಲಕ ರಾಜಿಮಾಡಿಕೊಂಡು ತನ್ನನ್ನು ನಂಬಿದವರಿಗೆ ಮೋಸ ಮಾಡುತ್ತಾನೆ. ಆ ವಿಷಯ ಕೇಳಿ ಅನುಯಾಯಿ ರೈತರೆಲ್ಲರೂ ಸತ್ತು ಬೀಳುವರು. ವಸಂತಸೇನನೆಂಬ ಒಬ್ಬ ಮಾತ್ರ ಅರೆಸತ್ತ ಸ್ಥಿತಿಯಲ್ಲಿರುತ್ತಾನೆ.

    ಸಮಾಜದಲ್ಲಿ ಆಗುವ ಅನ್ಯಾಯ, ಅನಾಚಾರ, ಮೋಸ, ವಂಚನೆ, ಸ್ವಾರ್ಥಸಾಧನೆಗಳಿಗೆ ಸಾಕ್ಷಿಯಾಗಿ ಈ ಮೂರು ದೃಶ್ಯಗಳನ್ನು ತೋರಿಸಿಯಾದ ನಂತರ ಕೊನೆಯ ದೃಶ್ಯ ಬಹಳ ಪರಿಣಾಮಕಾರಿಯೂ ಶಕ್ತಿಯುತವೂ ಆಗಿದೆ. ಅಲ್ಲಿಗೆ ಗೌತಮ ಗುರುವಿನೊಂದಿಗೆ ಬಂದು ಈ ಎಲ್ಲಾ ಅವ್ಯವಸ್ಥೆಗಳಿಗೆ ಪರಿಹಾರವೇನೆಂದು ಕೇಳುತ್ತೇನೆ. ‘ಇಷ್ಟು ಲೋಕಾನುಭವ ಪಡೆದ ನಂತರ ನೀನೇ ಕಂಡುಕೊಳ್ಳಬೇಕು’ ಎಂದು ಗುರು ಹೇಳುತ್ತಾನೆ. ಗೌತಮ ತಪಸ್ಸಿನ ಭಂಗಿಯಲ್ಲಿ ಧ್ಯಾನಾಸ್ತನಾಗಿ ಕುಳಿತುಕೊಳ್ಳುತ್ತಾನೆ. ಕಣ್ಣು ತೆರೆದಾಗ ಭಗ್ಗೆಂದು ಬೆಳಕುಗಳು ಹತ್ತಿಕೊಳ್ಳುತ್ತವೆ. ಗೌತಮ ಎದ್ದು ವಸಂತಸೇನನನ್ನು ಕರೆದುಕೊಂಡು ಜನರ ಮಧ್ಯ ಹೋಗಿ ನಿಲ್ಲುತ್ತಾನೆ. ಜನರು ಅರಿವು ಪಡೆಯುವುದರ ಮೂಲಕ ಬದುಕನ್ನು ಅದು ಇದ್ದಂತೆ ಸ್ವೀಕರಿಸುವುದೇ ಪರಿಹಾರವೆಂಬ ಸೂಚನೆಯೊಂದಿಗೆ ನಾಟಕ ಮುಗಿಯುತ್ತದೆ. ಇಲ್ಲಿ ಗೌತಮನ ಕಥೆಯೊಂದಿಗೆ ಜಗತ್ತು ಹೇಗಿದೆ ಎಂಬುದರ ಪರಿಚಯವನ್ನು ಮಾಡುವ ದೃಶ್ಯಗಳನ್ನು ಸೇರಿಸಿಕೊಂಡದ್ದು ನಾಟಕಕ್ಕೊಂದು ಭಿನ್ನ ಆಯಾಮವನ್ನು ನೀಡುತ್ತದೆ. ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಬಹುದಾದ ನಾಟಕವಿದು.

    ವಿಮರ್ಶಕಿ ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು

    Share. Facebook Twitter Pinterest LinkedIn Tumblr WhatsApp Email
    Previous Articleಉದ್ಘಾಟನೆಗೊಂಡ 7ನೇ ವರ್ಷದ ಮಂಗಳೂರು ಸಾಹಿತ್ಯ ಉತ್ಸವ
    Next Article ಮಂಗಳೂರಿನಲ್ಲಿ ಗಾಯಕಿ ಸೂರ್ಯಗಾಯತ್ರಿ ‘ರಾಮಂ ಭಜೇ’ | ಜ. 12ರಂದು
    roovari

    Add Comment Cancel Reply


    Related Posts

    ಪರಿಚಯ | ಯಕ್ಷ ಪ್ರತಿಭೆಯ ಕಲಾವಲ್ಲರಿ – ಶ್ರುತಿ ಭಟ್ ಮಾರಣಕಟ್ಟೆ

    July 6, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಚನ ವ್ಯಾಖ್ಯಾನ ಕಾರ್ಯಕ್ರಮ

    July 5, 2025

    Book review | The Gory Account of Genocide in the Heaven of India

    July 5, 2025

    ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಕಲಿಕಾ ತರಬೇತಿ ಪ್ರಾರಂಭ

    July 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.