ಶೇಣಿ : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಸಹಯೋಗದೊಂದಿಗೆ ಕೇರಳ ಹಾಗೂ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ರಂಗ ನಿರ್ದೇಶಕ, ನಟ, ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಗಾಗಿ ‘ರಂಗ ಸಂಸ್ಕೃತಿ’ ಕಾರ್ಯಾಗಾರವನ್ನು ದಿನಾಂಕ 8 ಆಗಸ್ಟ್ 2024ರಂದು ಬೆಳಗ್ಗೆ 10-00 ಗಂಟೆಗೆ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ತರಗತಿಯಲ್ಲಿ ಆಯೋಜಿಸಲಾಗಿದೆ.
ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶಾಸ್ತ ಕುಮಾರ್ ಎ. ಇವರ ಅಧ್ಯಕ್ಷತೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ರಂಗಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ಮತ್ತು ಶ್ರೀ ಶಾರದಾಂಬಾ ಹಿರಿಯ ಪ್ರಾಥಮಿಕ ಶಾಲೆಯ ಮ್ಯಾನೇಜರ್ ಶ್ರೀಮತಿ ಶಾರದಾ ವೈ. ಇವರ ಗೌರವ ಉಪಸ್ಥಿತಿಯಲ್ಲಿ ರಂಗ ನಿರ್ದೇಶಕ ಉದಯ ಸಾರಂಗ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಯುವ ಸಾಹಿತಿ ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಇವರು ಸಮಾರೋಪದ ನುಡಿಗಳನ್ನಾಡಲಿದ್ದಾರೆ.