ಮೈಸೂರು : ಮೈಸೂರಿನ ಶ್ರೀಗುರು ಕಲಾ ಶಾಲೆ ಅರ್ಪಿಸುವ ‘ರಂಗ ತರಬೇತಿ ಶಿಬಿರ’ವು ದಿನಾಂಕ 01-06-2024ರಿಂದ ಪ್ರತಿ ಶನಿವಾರ ಮತ್ತು ಭಾನುವಾರದಂದು ನಡೆಯಲಿದೆ. 4ರಿಂದ 14 ವರ್ಷ ವಯಸ್ಸಿನ ಆಸಕ್ತರು ದಿನಾಂಕ 30-05-2024ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980794690 ಮತ್ತು 9916617084.
ಶ್ರೀಗುರು ಕಲಾ ಶಾಲೆಯು ಮೈಸೂರಿನ ಶ್ರೀರಾಂಪುರದಲ್ಲಿ (ಪ್ರೀತಿ ಲೇಔಟ್)ನಲ್ಲಿ 2016ರಂದು ಸ್ಥಾಪನೆಯಾಯಿತು. ಇಲ್ಲಿ ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲ ವಯೋಮಾನದ ಆಸಕ್ತರಿಗೂ ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಕಾಶವಾಣಿಯಲ್ಲಿ ‘ಮಕ್ಕಳ ಮಂಟಪ’ ಮತ್ತು ‘ಕೇಳಿ ಗಿಳಿಗಳಿರ’ ಎಂಬ ಕಾರ್ಯಕ್ರಮಗಳನ್ನು ಹಲವಾರು ಬಾರಿ ನೀಡಿದ್ದಾರೆ. ಪ್ರತಿ ವಾರದ ಎರಡು ದಿನಗಳಂದು ರಂಗ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಮೂರು ತಿಂಗಳ ಅವಧಿಗೆ ಹತ್ತು ವಿದ್ಯಾರ್ಥಿಗಳನ್ನು ಮಾತ್ರ ಆಯ್ದುಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ರಂಗಭೂಮಿಯ ಎಲ್ಲಾ ಆಯಾಮಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಶಿಬಿರದ ಕೊನೆಯಲ್ಲಿ ಮಕ್ಕಳು ಒಂದು ನಾಟಕದಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ನಮ್ಮೆಲ್ಲ ಚಟುವಟಿಕೆಗಳಿಗೆ ಪೋಷಕರ, ಸ್ನೇಹಿತರ ಮತ್ತು ಹಿತೈಷಿಗಳ ಪ್ರೋತ್ಸಾಹ ನಿರಂತರವಾಗಿ ಸಿಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.
ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಮಕ್ಕಳ ಬೇಸಿಗೆ ಶಿಬಿರ “ಪುಟಾಣಿ ಪರ್ ಪಂಚ”. ಇಪ್ಪತ್ತೈದು ದಿನಗಳ ಶಿಬಿರ ಯಶಸ್ವಿಯಾಗಿ ನಡೆದು ಹೆಚ್ಚು ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದ್ದಾರೆ. 2024ರ ಜೂನ್ 1ನೇ ತಾರೀಖಿನಿಂದ ಮೂರು ತಿಂಗಳ ಮಕ್ಕಳ ರಂಗ ಶಿಬಿರವನ್ನು (ಪ್ರತಿ ಶನಿವಾರ ಮತ್ತು ಆದಿತ್ಯವಾರ) ಆಯೋಜಿಸಲಾಗುತ್ತಿದೆ. ರಂಗ ಭೂಮಿಯ ವಿವಿಧ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಮಕ್ಕಳಿಗೆ ತರಬೇತಿಯನ್ನು ನೀಡಲಾಗುವುದು. ನಾಟಕ ವಾಚನ, ರಂಗದ ಆಟಗಳು, ರಂಗ ಸಂಗೀತ, ಅಭಿನಯ, ಮುಖವಾಡ ತಯಾರಿಕೆ, ಪ್ರಸಾಧನ, ರಂಗಸಜ್ಜಿಕೆ, ಕೋಲಾಟ, ಕಂಸಾಳೆ, ಕತೆ ಹೇಳುವುದು, ಕಥಾ ರಚನೆ, ಭಾಷಣ ಕಲೆ, ಕನ್ನಡ ವ್ಯಾಕರಣ, ಪದ್ಯ ರಚನೆ ಹೀಗೆ ಹತ್ತು ಹಲವಾರು ವಿಚಾರಗಳನ್ನು ತರಬೇತಿಯ ಅವಧಿಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಶಿಬಿರದ ಮುಕ್ತಾಯ ಸಮಾರಂಭಕ್ಕೆ ಮಕ್ಕಳಿಂದ ಒಂದು ನಾಟಕವನ್ನು ಮಾಡಿಸಲಾಗುವುದು. ರಂಗಭೂಮಿಯ ಪಾಠಗಳನ್ನು ಕಲಿತು ಮಕ್ಕಳು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಲು ಇಂತಹ ಶಿಬಿರಗಳು ಅತ್ಯಂತ ಸಹಾಯಕಾರಿ ಎಂದು ಹೇಳಬಹುದು.
• ಎನ್.ಧನಂಜಯ – ಅಧ್ಯಕ್ಷರು, ಶ್ರೀಗುರು ಕಲಾಶಾಲೆ