15 ಫೆಬ್ರವರಿ 2023, ಮಂಡ್ಯ: ರಂಗಬಂಡಿ ಮಳವಳ್ಳಿ ಟ್ರಸ್ಟ್ (ರಿ). ಇದರ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಇದೇ 16/02/2023ರಂದು ಸಂಜೆ 6:00ಕ್ಕೆ ಬಯಲು ರಂಗಮಂದಿರ ಶಾಂತಿ ಕಾಲೇಜು ಅವರಣ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಹಕಾರದೊಂದಿಗೆ ನಡೆಯಲಿದೆ.
ಗಂಗೆ ಗೌರಿ ಪ್ರಸಂಗ – ನಾಟಕದ ಬಗ್ಗೆ
ಬೆಸ್ತರ ಹುಡುಗಿ ಗಂಗೆ ಭುವಿಗೆ ಬಂದ ಶಿವನಲ್ಲಿ ಮೋಹಗೊಳ್ಳುತ್ತಾಳೆ.ಶಿವ ಗಂಗೆಯಲ್ಲಿ ಅನುರಕ್ತ ನಾಗಿ ಅವಳನ್ನು ತನ್ನ ಜಡೆಯಲ್ಲಿ ಹುದುಗಿಸಿಕೊಂಡು ಕೈಲಾಸಕ್ಕೆ ಕರೆದೋಯ್ಯುತಾನೆ. ಸವತಿ ಮತ್ಸರ್ಯದಿಂದ ಗೌರಿ ಗಂಗೆಯನ್ನು ಹೀನಕುಲದವಳೆಂದು ಜರಿದು ಕೈಲಾಸದಿಂದ ಹೊರ ಅಕಲು ಬಯಸುತ್ತಾಳೆ.
ಗಂಗೆ ಕೈಲಾಸದಿಂದ ಹೊರಡುವಾಗ ಗೌರಿ ಹೊರಗಾಗುತ್ತಾಳೆ (ಮುಟ್ಟಗುತ್ತಾಳೆ ). ಗೌರಿ ಸೂತಕದಿಂದ ಹೊರಬರಬೇಕಾದರೆ ಗಂಗೆ ಬೇಕೇಬೇಕೆಂದು ಅರಿತ ಗಂಗೆ ಕೈಲಾಸದಿಂದ ಮಾಯವಾಗುತ್ತಾಳೆ.
ಗಂಗೆಯನ್ನು ತರಲು ಗೌರಿ ವೀರಣ್ಣನನ್ನು ಭೂಮಿಗೆ ಕಳಿಸುತ್ತಾಳೆ. ಭೂಮಿಯಲ್ಲೂ ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಜನರು ಎಲ್ಲ ನದಿಯ ನೀರನ್ನು ಕಲುಷಿತ ಮಾಡಿದ್ದಾರೆ. ಗಂಗನದಿಯ ನೀರು ಹಾಳಾಗಿದೆ, ವೀರಣ್ಣನಿಗೆ ಗಂಗೆಯ ಸ್ಥಿತಿ ಅರಿವಾಗುತ್ತದೆ. ಒಂದು ಕೊಡ ನೀರು ಬೇಕೆಂದು ಗಂಗೆಯಲ್ಲಿ ವಿನಂತಿಸುತ್ತಾನೆ. ಗಂಗೆ ಮಳೇಕೋಯ್ಲಿ ನಿಂದಾಗಿ ರೈತನೊಬ್ಬನ ಮನೆಯಲ್ಲಿ ಗುಪ್ತಗಮಿಯಾಗಿ ಇರುವುದನ್ನು ಅವನನ್ನು ವಿನಂತಿಸಿದರೆ
ಒಂದು ಕೊಡ ನೀರು ಸಿಗಬಹುದೆಂದು ಸುಚಿಸುತ್ತಾಳೆ. ಆ ಒಂದು ಕೊಡ ನೀರೇ ಗಂಗೆ ಅವಳನ್ನು ವೀರಣ್ಣ ಕೈಲಾಸಕ್ಕೆ ಒಯುತಾನೆ. ಮತ್ತೆ ಕೊಡದೊಳಗೆ ಬಂದ ಗಂಗೆ ಯನ್ನು ಗೌರಿ ಮೂಡ ಅಸಲು ಮುನಿದ ಗಂಗೆ ಯು ತನ್ನ ಹಳೆಯ ಬೆಸ್ತರ ಕೆರಿಗೆ ಹಿಂದಿರುಗುತ್ತಾಳೆ. ಬೆಸ್ತರ ಕೆರಿಗೆ ಗೌರಿಯು ಗಂಗೆಯನ್ನು ಹುಡುಕಿ ಬಂದು ಕ್ಷಮೆ ಕೇಳುತ್ತಾಳೆ. ಮತ್ತೆ ಲೋಕದಲ್ಲಿ ವರ್ಷದರೆ ಯಾಗಿ ಗೌರಿ ಆ ನೀರಲ್ಲಿ ಸ್ನಾನ ಮಾಡಿ ಸೂತಕ ಕಳೆಯುತ್ತಾಳೆ.
ಬಯಲು ಸೀಮೆಯ ದೊಂಬಿದಾಸರು ಈ ಕಡು ಗೀತೆಯನ್ನು ಸಮಕಾಲಿನ ಸಂದರ್ಭಕ್ಕೆ ಒಪ್ಪಿಸಿ, ಡಾ || ಚಂದ್ರು ಕಳೆನಹಳ್ಳಿ ಯವರು ಜಾನಪದ ನಾಟಕವಾಗಿ ರೂಪಿಸಿದ್ದಾರೆ. ದೊಂಬಿದಾಸರು ಮೇಳದವರಾಗಿ ಭೂಮಿ ಕೈಲಾಸದಲ್ಲಿ ಪರ್ಯಾಟನೆ ಮಾಡುತ್ತ ನಾಟಕ ನಡೆಸುತ್ತಾರೆ.
ರಂಗಬಂಡಿ ಮಳವಳ್ಳಿ ಟ್ರಸ್ಟ್ (ರಿ) ಬಗ್ಗೆ
ರಂಗಬಂಡಿ ತಂಡ ರಂಗಾಸಕ್ತರಿಗೆ ನಾಟಕವನ್ನು ಉಣಬಡಿಸುವುದು ಮಾತ್ರವಲ್ಲ ರಂಗಬ್ಯಾರ್ಥಿಗಳಿಗೆ ಅಧ್ಯಯನಶಿಲತೆ, ರಂಗಪ್ರಯೋಗಗಳವಿಭಿನ್ನತೆ, ಭಾಷಾ ಪ್ರೇಮದ ಹೊಳಪು, ಅಂಗಿಕ ಚಲನೆಯ ಸರಿಯಾದ ಮಾರ್ಗದರ್ಶನ ಹೆಗ್ಗುರಿ ಯನ್ನು ಹೊಂದಿದೆ. ಬದುಕಿಗೆ ಪೂರಕವಾದ ನಿಜ ಸಂಭವ್ಯಾ ವಿದ್ಯಾರ್ಹತೆ ಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯನ್ನು ಮುಂದಿಟ್ಟುಕೊಂಡಿದೆ. ಯಾವುದೇ ಸತ್ಸಂಕಲ್ಪಕ್ಕೆ ಸಾಮಾಜಿಕ ಕಳಕಳಿ ಇರುವ ಸಹೃದಯಿ ಗಳ ಸಹಕಾರ ತೀರಾ ಅತ್ಯಗತ್ಯ ಎನ್ನುವುದು ಸರ್ವ ವಿದಿತಾ ಅಂತಲೆ ನಿಮ್ಮ ಮುಂದೆ ರಂಗಬಂಡಿ ನಿಂತಿದೆ. ಪಯಣ ಆರಂಭವಾಗಬೇಕಿದೆ. ಎಲ್ಲರೂ ಕೈಜೋಡಿಸೋಣ. ರಂಗಕೈಕರ್ಯದಲ್ಲಿ ಉತ್ಸಾಹದಿಂದ ಭಾಗಿಯಾಗೋಣ. ದಿನವೂ ನಮನದೊಂದಿಗೆ ಈ ಪರಿಚಯ ಪತ್ರದ ಮುಖೇನ ನಿಮ್ಮ ಮುಂದಿಟ್ಟಿದ್ದೇವೆ. ಕೈ ಹಿಡಿದು ಮುನ್ನಡೆಸಿ.
ನಿರ್ದೇಶಕರ ಕುರಿತು
ಉಮಾಶ್ರೀ ಜಿ ರವರು ಮೂಲಕ ತಹ ಒಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು ಇವರು ಸತತ 14 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಇವರು ಸಾಣೇಹಳ್ಳಿಯ ಮೊದಲ ವಿಧ್ಯಾರ್ಥಿಯಾಗಿದ್ದು ಶಿವ ಸಂಚಾರದಲ್ಲಿ 4 ವರ್ಷ ತಿರುಗಾಟ ಮಾಡಿದ್ದಾರೆ ಮತ್ತು ರಂಗಾಯಣ ಕಲಬುರಗಿಯಲ್ಲಿ ನಟಿ ಸಹ ನಿರ್ದೇಶಕಿ ಕಾರ್ಯ ನಿರ್ವಹಿಸಿದ್ದಾರೆ ಇವರು ಚಿದಂಬರ ರಾವ್ ಜಂಬೆ ಭಾಗೀರಥಿ ಬಾಯಿ ಕದಂ , ಮಂಜುನಾಥ ಎಲ್ ಬಡಿಗೇರ ಮಾಲತೇಶ್ ಬಡಿಗೇರ ಮಹಾದೇವ ಹಡಪದ ನಟರಾಜ್ ಹೊನ್ನವಳ್ಳಿ ಸವಿತಾ NSD , ಮಹೇಶ್ ಪಾಟೀಲ್ ಮುಂತಾದವರ ಜೊತೆ ಸಹ ನಿರ್ದೇಶಕಿಯಾಗಿ ಮತ್ತು ನಟಿ ಯಾಗಿ ಕಾರ್ಯ ನಿರ್ವಹಿಸಿದ್ದಾರೆ ಪ್ರಸ್ತುತ ರಂಗಬಂಡಿ ತಂಡಕ್ಕೆ ನಿರ್ದೇಶನ ಮಾಡಿದ್ದಾರೆ