ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ವನ್ನು ದಿನಾಂಕ 01 ಫೆಬ್ರವರಿ 2025ರಿಂದ 03 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 01 ಫೆಬ್ರವರಿ 2025ರಂದು ಸಂಜೆ ಗಂಟೆ 5-45ಕ್ಕೆ ‘ರಂಗಭೂಮಿ ರಂಗೋತ್ಸವ’ದ ಉದ್ಘಾಟನೆಯನ್ನು ರಂಗಭೂಮಿ ಇದರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರ ನೆರವೇರಿಸಲಿದ್ದು, ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಲಿರುವರು. ಸಭಾ ಕಾರ್ಯಕ್ರಮದಲ್ಲಿ 45ನೇ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರು ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ರಂಗರಥ ಟ್ರಸ್ಟ್ (ರಿ.) ತಂಡದವರು ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ‘ಧರ್ಮನಟಿ’ ಐತಿಹಾಸಿಕ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 02 ಫೆಬ್ರವರಿ 2025ರಂದು ಸಂಜೆ 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರು ನಾಟಕಕಾರ ಹಾಗೂ ಯಕ್ಷಗಾನ ಮತ್ತು ನಾಟಕ ರಂಗದ ಹಿರಿಯ ಕಲಾವಿದರಾದ ಡಾ. ಭಾಸ್ಕರಾನಂದ ಕುಮಾರ್ ಇವರಿಗೆ ‘ರಂಗಭೂಮಿ ಪ್ರಶಸ್ತಿ -2025’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ರಂಗರಥ ಟ್ರಸ್ಟ್ (ರಿ.) ತಂಡದವರಿಂದ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಸಾಂಸಾರಿಕ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 03 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ರಂಗಭೂಮಿ (ರಿ.) ಉಡುಪಿ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ, ಕೇರಳ ಕಲ್ಚರ್ ಆ್ಯಂಡ್ ಸೋಶಿಯಲ್ ಸೆಂಟರ್ (ರಿ.) ಉಡುಪಿ, ಕರ್ನಾಟಕ ಜಾನಪದ ಪರಿಷತ್ (ರಿ.) ಉಡುಪಿ ಜಿಲ್ಲಾ ಘಟಕ ಇವರ ಜಂಟಿ ಸಹಯೋಗದಲ್ಲಿ ‘ಜಾನಪದ ಪ್ರಶಸ್ತಿ’ ಪ್ರದಾನ ಹಾಗೂ ‘ಕೇರಳ ಜಾನಪದ ಉತ್ಸವ’ ನಡೆಯಲಿದೆ. ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಸಿಕರ್ ಕೇರಳ ಎಂಟರ್ ಟೇನ್ ಮೆಂಟ್ ಇವರಿಂದ ಕಲಾಭವನ್ ರಾಗೇಶ್ ಇವರ ನಿರ್ದೇಶನದಲ್ಲಿ ನಡೆಯುವ ‘ಕೇರಳ ಜಾನಪದ ಉತ್ಸವ’ದಲ್ಲಿ ಕಳರಿಪಯಟ್ಟು, ವಡಿ ನೃತ್ಯಂ, ಆದಿವಾಸಿ ನೃತ್ಯಂ, ಕರಿಂಕಾಳಿಯಾಟ್ಟಂ ಮತ್ತು ಮುಡಿಯೆಟ್ಟು ಹಾಗೂ ಕೇರಳ ಕಲ್ಚರ್ ಆ್ಯಂಡ್ ಸೋಶಿಯಲ್ ಸೆಂಟರ್ (ರಿ.) ಉಡುಪಿ ಇದರ ಮಹಿಳಾ ಘಟಕದಿಂದ ‘ತಿರುವಾತಿರಕಳಿ’ ಪ್ರದರ್ಶನಗೊಳ್ಳಲಿದೆ.