Subscribe to Updates

    Get the latest creative news from FooBar about art, design and business.

    What's Hot

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28

    February 23, 2026

    ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25

    February 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28
    Drama

    ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ‘ರಂಗಹಬ್ಬ–14’ | ಫೆಬ್ರವರಿ 22ರಿಂದ 28

    February 23, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು 14ನೇ ವರ್ಷದ ‘ರಂಗಹಬ್ಬ–14’ ನಾಟಕೋತ್ಸವವನ್ನು ದಿನಾಂಕ 22ರಿಂದ 28 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.

    ಈ ಬಾರಿಯ ರಂಗಹಬ್ಬವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ನಗರಸಭೆ, ನವದೆಹಲಿಯ ಸಂಸ್ಕೃತಿ ನಿರ್ದೇಶನಾಲಯವು ಸಹಯೋಗ ನೀಡಿವೆ. ತುಳು ರಂಗಭೂಮಿ ಮತ್ತು ತುಳು ಚಲನಚಿತ್ರ ರಂಗದ ಹಿರಿಯ ರಂಗಕರ್ಮಿ ಡಾ. ಪಿ. ಸಂಜೀವ ದಂಡೆಕೇರಿಯವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ. ಯಕ್ಷಗುರು ಯು.ದುಗ್ಗಪ್ಪ ಇವರ ನೆನಪಿನಲ್ಲಿ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ. ಕೃಷ್ಣ ಸ್ವಾಮಿ ಜೋಷಿ ಇವರಿಗೆ ಪ್ರದಾನ ಮಾಡಲಾಗುವುದು.

    ದಿನಾಂಕ 22 ಫೆಬ್ರವರಿ 2026ರಂದು ಜರ್ನಿ ಥೇಟರ್ ಗೂಪ್ ಮಂಗಳೂರು ತಂಡವು ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’, ದಿನಾಂಕ 23 ಫೆಬ್ರವರಿ 2026ರಂದು ಸುಮನಸಾ ಕೊಡವೂರು ಉಡುಪಿ ತಂಡದ ಕಲಾವಿದರು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ತುಳು ನಾಟಕ ‘ಯೇಸ’, ದಿನಾಂಕ 24 ಫೆಬ್ರವರಿ 2026ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದವರು ಡಾ. ಲವ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಜೋಕುಮಾರ ಸ್ವಾಮಿ’, ದಿನಾಂಕ 25 ಫೆಬ್ರವರಿ 2026ರಂದು ಸುಮನಸಾ ಕೊಡವೂರು ತಂಡದ ಸದಸ್ಯರಿಂದ ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ಕನ್ನಡ ಯಕ್ಷನಾಟಕ ‘ಮೈಂದ ದ್ವಿವಿದ ಕಾಳಗ’, ದಿನಾಂಕ 26 ಫೆಬ್ರವರಿ 2026ರಂದು ಪಾಂಡಿಚೇರಿಯ ಅದಿಶಕ್ತಿ ಥೇಟರ್ ಸದಸ್ಯರಿಂದ ವಿನಯ ಕುಮಾರ್ ಇವರ ನಿರ್ದೇಶನದಲ್ಲಿ ಇಂಗ್ಲೀಷ್‌ ನಾಟಕ ‘ಎ ಉಮೆನ್ ಆರ್ ನಾಟ್ ಟು ಬಿ’, ದಿನಾಂಕ 27 ಫೆಬ್ರವರಿ 2026ರಂದು ಉಡುಪಿಯ ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಈದಿ’, ದಿನಾಂಕ 28 ಫೆಬ್ರವರಿ 2026ರಂದು ಮೈಸೂರು ರಂಗವಲ್ಲಿ ತಂಡದಿಂದ ರವಿ ಪ್ರಸಾದ್ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಪರಮೇಶಿ ಪೇಮಪ್ರಸಂಗ’ ಪ್ರದರ್ಶನಗೊಳ್ಳಲಿದೆ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25
    Next Article ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23
    roovari

    Add Comment Cancel Reply


    Related Posts

    ಕಾಲೇಜಿನ ಸಾಂಸ್ಕೃತಿಕ ರಂಗ ತಂಡದಿಂದ ನಾಟಕ ಪ್ರದರ್ಶನ | ಫೆಬ್ರವರಿ 23

    February 23, 2026

    ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25

    February 23, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ‘ವಿಚಾರ ಸಂಕಿರಣ’ | ಫೆಬ್ರವರಿ 26

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.