ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ-2024’ ಕಾರ್ಯಕ್ರಮವು ದಿನಾಂಕ 05-04-2024ರಿಂದ 07-04-2024ರವರೆಗೆ ಮೂರು ದಿನಗಳ ಕಾಲ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ನಡೆಯಲಿದೆ.
ದಿನಾಂಕ 05-04-2024ರಂದು ಗಂಟೆ 6.45ಕ್ಕೆ ‘ನಾದ ಮಣಿನಾಲ್ಕೂರು’ ಇವರ ಸದಾಶಯದ ಅರಿವಿನ ಹಾಡುಗಳೊಂದಿಗೆ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದೆ. ನಂತರ 7-00 ಗಂಟೆಗೆ ಅಸ್ತಿತ್ವ (ರಿ.) ಮಂಗಳೂರು ಇವರು ಅಭಿನಯಿಸುವ ಅರುಣ್ ಲಾಲ್ ಕೇರಳ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಜುಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 06-04-2024ರಂದು ಎರಡನೇ ದಿನ ಬ್ರಹ್ಮಾವರ ತೆಂಕು ಬಿರ್ತಿ ಅಂಕದ ಮನೆ ಜಾನಪದ ಕಲಾ ತಂಡ (ರಿ.) ಪ್ರಸ್ತುತ ಪಡಿಸುವ ‘ಜನಪದ ಸಂಜೆ’ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ರಾಜ್ ಗುರು ಹೊಸಕೋಟೆ ಇವರ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ರಂಗಪಯಣ ಪ್ರಸ್ತುತ ಪಡಿಸುವ ‘ನವರಾತ್ರಿಯ ಕೊನೆ ದಿನ’ ನಾಟಕ ಹಾಗೂ ದಿನಾಂಕ 07-04-2024ರಂದು ಮೂರನೇ ದಿನ ಮಣಿಪಾಲದ ಸಂಗಮ ಕಲಾವಿದೆರ್ ಪ್ರಸ್ತುತ ಪಡಿಸುವ ರೋಹಿತ್ ಎಸ್. ಬೈಕಾಡಿಯವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಮೃತ್ಯುಂಜಯ’ ನಾಟಕ ಪ್ರದರ್ಶನಗೊಳ್ಳಲಿದೆ.