13 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮವು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಇವರ ಅಧ್ಯಕ್ಷತೆಯಲ್ಲಿ ದಿನಾಂಕ 11-03-2023ರಂದು ನಡೆಯಿತು.
“ಮಹಿಳೆಯರಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪುರುಷನಿಗೆ ಪ್ರತಿಯೊಂದು ಸಂದರ್ಭ ಆಧಾರವಾಗಿ ನಿಂತವರು ಮಹಿಳೆಯರು, ಮಾತೆಯರು ಜಗತ್ತಿನ ಸರ್ವಶಕ್ತಿಯಾಗಿದ್ದಾರೆ. ರಾಣಿ ಅಬ್ಬಕ್ಷ ಸ್ವಾಭಿಮಾನಕ್ಕೆ ಹೆಸರಾದ ಮಹಿಳೆ, ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ತುಳುನಾಡಿನ ಮಣ್ಣಿಗೆ ಕೀರ್ತಿ ತಂದವರು” ಎಂದು ಬಾಲಚಂದ್ರ ಕೆ. ಅಭಿಪ್ರಾಯಪಟ್ಟರು.
“ಸ್ವಾಭಿಮಾನದ ಸಂಕೇತ ರಾಣಿ ಅಬ್ಬಕ್ಕ” ವಿಷಯದ ಕುರಿತು ಮಾತನಾಡಿದ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಮಾತೃ ಮೂಲ (ಅಳಿಯಕಟ್ಟು) ಕುಟುಂಬ ಪದ್ಧತಿಯ ತುಳುನಾಡಿನ ಬದುಕಿನಲ್ಲಿ ಪುರುಷ ಪಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ವಿದೇಶಿಯರೊಂದಿಗೆ ಹೋರಾಡಿದ ವೀರ ವನಿತೆ ಅಬ್ಬಕ್ಕ ಎಂದರು.
ಶ್ರೀ ಬಾಲಚಂದ್ರ ಕೆ., ಉಪನ್ಯಾಸಕಿ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಶ್ರೀಮತಿ ಜಯಂತಿ ಸಂಕಮಾರ್ ಉಪಸ್ಥಿತರಿದ್ದರು. ವಿದ್ಯಾದಾಯಿನಿ ಪ್ರೌಢಶಾಲೆ ಪ್ರಾಧ್ಯಾಪಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು. ಅಬ್ಬಕ್ಕ ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆ ಗೈದರು ಮತ್ತು ಸ್ವಾಗತಿಸಿದರು.