Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ರಾಣಿ ಅಬ್ಬಕ್ಕ ಅಧ್ಯಯನ ಪೀಠದಿಂದ ಸರಣಿ ಉಪನ್ಯಾಸ ಕಾರ್ಯಕ್ರಮ
    Literature

    ಮಂಗಳೂರಿನ ರಾಣಿ ಅಬ್ಬಕ್ಕ ಅಧ್ಯಯನ ಪೀಠದಿಂದ ಸರಣಿ ಉಪನ್ಯಾಸ ಕಾರ್ಯಕ್ರಮ

    March 13, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    13 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಹಮ್ಮಿಕೊಂಡ ಸರಣಿ ಉಪನ್ಯಾಸ ಕಾರ್ಯಕ್ರಮವು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಇವರ ಅಧ್ಯಕ್ಷತೆಯಲ್ಲಿ ದಿನಾಂಕ 11-03-2023ರಂದು ನಡೆಯಿತು.

    “ಮಹಿಳೆಯರಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪುರುಷನಿಗೆ ಪ್ರತಿಯೊಂದು ಸಂದರ್ಭ ಆಧಾರವಾಗಿ ನಿಂತವರು ಮಹಿಳೆಯರು, ಮಾತೆಯರು ಜಗತ್ತಿನ ಸರ್ವಶಕ್ತಿಯಾಗಿದ್ದಾರೆ. ರಾಣಿ ಅಬ್ಬಕ್ಷ ಸ್ವಾಭಿಮಾನಕ್ಕೆ ಹೆಸರಾದ ಮಹಿಳೆ, ಪ್ರಥಮ ಸ್ವಾತಂತ್ರ ಹೋರಾಟಗಾರ್ತಿಯಾಗಿ ತುಳುನಾಡಿನ ಮಣ್ಣಿಗೆ ಕೀರ್ತಿ ತಂದವರು” ಎಂದು ಬಾಲಚಂದ್ರ ಕೆ. ಅಭಿಪ್ರಾಯಪಟ್ಟರು.

    “ಸ್ವಾಭಿಮಾನದ ಸಂಕೇತ ರಾಣಿ ಅಬ್ಬಕ್ಕ” ವಿಷಯದ ಕುರಿತು ಮಾತನಾಡಿದ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಮಾತೃ ಮೂಲ (ಅಳಿಯಕಟ್ಟು) ಕುಟುಂಬ ಪದ್ಧತಿಯ ತುಳುನಾಡಿನ ಬದುಕಿನಲ್ಲಿ ಪುರುಷ ಪಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ವಿದೇಶಿಯರೊಂದಿಗೆ ಹೋರಾಡಿದ ವೀರ ವನಿತೆ ಅಬ್ಬಕ್ಕ ಎಂದರು.

    ಶ್ರೀ ಬಾಲಚಂದ್ರ ಕೆ., ಉಪನ್ಯಾಸಕಿ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕಿ ಶ್ರೀಮತಿ ಜಯಂತಿ ಸಂಕಮಾ‌ರ್ ಉಪಸ್ಥಿತರಿದ್ದರು. ವಿದ್ಯಾದಾಯಿನಿ ಪ್ರೌಢಶಾಲೆ ಪ್ರಾಧ್ಯಾಪಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು. ಅಬ್ಬಕ್ಕ ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆ ಗೈದರು ಮತ್ತು ಸ್ವಾಗತಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತಿ ಶಶಿಕಲಾ ಚಂದ್ರಶೇಖರ್ ರವರಿಗೆ ಸನ್ಮಾನ
    Next Article ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ
    roovari

    Add Comment Cancel Reply


    Related Posts

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಕೊಂಕಣಿ ಲೇಖಕಿಯರ ಸಾಹಿತ್ಯ ಪ್ರಸ್ತುತಿ ‘ಅಸ್ಮಿತಾ’ ವಿಶೇಷ ಕಾರ್ಯಕ್ರಮ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.