Subscribe to Updates

    Get the latest creative news from FooBar about art, design and business.

    What's Hot

    ಅರೆಭಾಷೆ ರಂಗ ತರಬೇತಿ ಶಿಬಿರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಮೇ 30

    May 14, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೆರ್ಲದಲ್ಲಿ ‘ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ’
    Literature

    ಪೆರ್ಲದಲ್ಲಿ ‘ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ’

    August 16, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಇಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ  ‘ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ’ ಕಾರ್ಯಕ್ರಮವು 15 ಆಗಸ್ಟ್ 2024 ರಂದು ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ಮಾತನಾಡಿ “ಗ್ರಂಥಾಲಯಗಳು ಸಮೃದ್ಧ ಸಮಾಜದ ವಿದ್ಯಾದೇಗುಲಗಳು. ಸಮತಾಭಾವವನ್ನು ಕಟ್ಟಿಕೊಡುವುದರೊಂದಿಗೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಈ ಮೂಲಕ ಶ್ರೇಷ್ಠ ಭಾರತವನ್ನು ಕಟ್ಟಲು ಸಾಧ್ಯವಿದೆ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಭಾಗವಹಿಸಿದ್ದರು.
    ಕವಿಗಳಾದ  ನವ್ಯಾಶ್ರೀ  ಸ್ವರ್ಗ ‘ನೈಜತೆ’,  ಆನಂದ ರೈ ಅಡ್ಕಸ್ಥಳ ‘ದೇಶ ಸೇವೆ’, ಹಿತೇಶ್ ಕುಮಾರ್ ನೀರ್ಚಾಲ್ ‘ರಾಷ್ಟ್ರೀಯತೆ’, ಸುಜಿತ್ ಕುಮಾರ್ ಬೇಕೂರು ‘ಐಕ್ಯತೆ’, ಸುಂದರ ಬಾರಡ್ಕ ‘ಅಂಬೇಡ್ಕರ್ – ಗಾಂಧೀಜಿ’
    ಬಾಲಕೃಷ್ಣ ಬೇರಿಕೆ ‘ಆಕ್ರಮಣ’, ಪ್ರಿಯಾ ಬಾಯಾರ್ ‘ಗಾಂಧಿ ತಾತ’, ಕು. ಮನ್ವಿತಾ ‘ಪ್ರಕೃತಿ’,  ಸನ ಎಂ. ಪಿ.  ‘ಭಾರತ ಸೈನ್ಯ’,  ರಿಷಾ ಎಸ್. ‘ಉತ್ಸವ’, ರಾಮ ಪಟ್ಟಾಜೆ ‘ಪೊರಕೆ’ ಹಾಗೂ ವನಜಾಕ್ಷಿ ಚಂಬ್ರಕಾನ ‘ಕೋಟೆ’ ಹೀಗೆ ಒಂದು ಆಶಯದಲ್ಲಿ ವಿವಿಧ ದೃಷ್ಠಿಕೋನಗಳ ಕವಿತೆಗಳನ್ನು ಪ್ರಸ್ತುತ ಪಡಿಸಿದರು.
     ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಬರಹಗಾರ ಹಾಗೂ ಕವಿಗಳಾದ  ಶ್ರೀನಿವಾಸ ಪೆರಿಕ್ಕಾನ ಮಾತನಾಡಿ “ಸೂರ್ಯನಿಗೆ ಎದುರಾಗಿ ಅಥವಾ ಬೆನ್ನು ಹಾಕಿ ನಿಂತು ಮನಸನ್ನು ದೃಶ್ಯದೊಳಗೆ ಲೀನಗೊಳಿಸಿದಾಗ ಪ್ರಕೃತಿಯ ಕುರಿತು  ಕವಿತೆಗಳು ಮನಸ್ಸಲ್ಲಿ  ದೃಶ್ಯಾವಿಷ್ಕಾರ ಹೊಂದುತ್ತವೆ. ಪದಗಳಿಂದ ಹೊಸ ಲೋಕವನ್ನು ಪಟಲದಲ್ಲಿ ಮೂಡಿಸುವ  ಬರವಣಿಗೆಯು ಒಂದು ಚಮತ್ಕಾರವಾಗಿದೆ. ವಾಚ್ಯ ಮತ್ತು ಸೂಚ್ಯಗಳಿಂದ ಕೂಡಿಕೊಂಡು ವಿಷಯಕ್ಕೆ ಒತ್ತುನೀಡುವ  ಕವಿತೆಗಳು ವಾಸ್ತವಿಕತೆಯನ್ನು ತೆರೆದಿಡುವಂತಿದ್ದರೆ ಉತ್ತಮ. ಆಶಯದ ಆಳದಲ್ಲಿ ಕವಿತೆಗಳೆಂಬ ಒಸರುಗಳನ್ನು ಸೃಷ್ಠಿಸಿದ ಕವಿಗಳ ಕವಿತೆಗಳು ಆಸ್ವಾದನೆಗೆ ಮತ್ತು ಗ್ರಹಿಸುವಿಕೆಯಲ್ಲಿ ಯಶಸ್ಸಾಗುವುದು.” ಎಂದು ಕವಿತೆಗಳನ್ನು ವಿಮರ್ಶಿಸುತ್ತಾ ಪ್ರಶಂಸೆಯ ಮಾತುಗಳಾನ್ನಾಡಿದರು.
    ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಉಪಸ್ಥಿತರಿದ್ದರು. ಕಾಯ೯ದರ್ಶಿ ಉದಯ ಸಾರಂಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ವನಜಾಕ್ಷಿ ಚಂಬ್ರಕಾನ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ‘ಪದ್ಮ ಪಲ್ಲವ’ | ಆಗಸ್ಟ್ 18
    Next Article ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಳೆ
    roovari

    Comments are closed.

    Related Posts

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    ಗಣೇಶ ಪ್ರಸಾದಜೀಯವರ 9ನೆಯ ಕೃತಿ ‘ಕಾಂತೆ ಕವಿತೆ’ ಲೋಕಾರ್ಪಣೆ

    May 13, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.