ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗದ 118’ನೇ ಸರಣಿಯಲ್ಲಿ ಸಂಸ್ಥೆಯ ಗ್ರಾಮೀಣ ಶಾಖೆಯಾದ ಕೊಕ್ಕಡದ ಐವರು ವಿದ್ಯಾರ್ಥಿಗಳಾದ ಚಿರಂತನ, ಹೃದ್ಯ, ಅರ್ಚನಾ, ವರ್ಷಾ ಮತ್ತು ಶ್ರೀಹಿತ ಇವರು ದಿನಾಂಕ 22 ಡಿಸೆಂಬರ್ 2024ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿ ಜನರ ಮೆಚ್ಚುಗೆ ಪಡೆದರು.
ಈ ಕಾರ್ಯಕ್ರಮದ ಅಭ್ಯಾಗತರಾದ ಸಂಗೀತ ಗುರು ಶ್ರೀಮತಿ ಪದ್ಮಾವತಿ ಬಾಳ್ತಿಲ್ಲಾಯರು ಮಕ್ಕಳಿಗೆಲ್ಲ ಶುಭ ಹಾರೈಸಿದರು. ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಮತ್ತು ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಶ್ರೀಮತಿ ಶಶಿಪ್ರಭಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಸಹಕರಿಸಿದ್ದರು.