ಬೆಂಗಳೂರು: ಎಸ್. ಪಿ. ವರದರಾಜು ಆತ್ಮೀಯರ ಬಳಗದಿಂದ ನೀಡುವ ‘ಎಸ್.ಪಿ. ವರದರಾಜು ವಾರ್ಷಿಕ ಪ್ರಶಸ್ತಿ’ಗೆ ರಂಗಭೂಮಿ ಕ್ಷೇತ್ರದಿಂದ ಹುಬ್ಬಳ್ಳಿಯ ಹಿರಿಯ ಕಲಾವಿದೆ ಶಾಂತಾಬಾಯಿ ಬೀಳಗಿ ಹಾಗೂ ಸಿನಿಮಾ ಕ್ಷೇತ್ರದಿಂದ ಪ್ರಗತಿ ಅಶ್ವತ್ಥನಾರಾಯಣ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 19ನೇ ವರ್ಷದ ಪ್ರಶಸ್ತಿ ಇದಾಗಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
‘ಪ್ರಶಸ್ತಿ ಪ್ರದಾನ ಸಮಾರಂಭವು 11 ಫೆಬ್ರವರಿ 2025 ರಂದು ಸಂಜೆ 5.30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ನಟಿ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಿರ್ದೇಶಕ ಪಿ. ಶೇಷಾದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ರಾಜ್‌ಕುಮಾರ್ ಇವರ ಸೋದರ ಎಸ್. ಪಿ. ವರದರಾಜು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರಾದ್ದರಿಂದ ಎರಡೂ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತಿದೆ. ಎಂದರು.