ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು, ಸುರತ್ಕಲ್ ಹೋಬಳಿ ಘಟಕದ ವತಿಯಿಂದ ‘ಸಾಹಿತ್ಯ ಸಂಭ್ರಮ’ ಕಾರ್ಯಾಕ್ರಮವು ದಿನಾಂಕ 04 ಮೇ 2025ರಂದು ಸಂಜೆ ಘಂಟೆ 3.00 ರಿಂದ ಸುರತ್ಕಲ್ ವಿದ್ಯಾದಾಯಿನಿ ಸಂಕೀರ್ಣದ ವಿರಾಟ್ ಸಭಾಂಗಣದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗು ಸಂಶೋಧಕಿಯಾದ ಡಾ. ಇಂದಿರಾ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಲಾ ಟಿ. ಶೆಟ್ಟಿ, ಕಾಟಿಪಳ್ಳ ಬಿ. ಎನ್. ಜಿ. ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪಿ . ದಯಾಕರ್, ಸಾಹಿತಿ ಡಾ. ಗಣೇಶ್ ಅಮೀನ್ ಸಂಕಮಾರ್, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರೀಯ ಕಾರ್ಯಕಾರಿ ಸದಸ್ಯ ಡಾ. ಮಾಧವ ಎಂ. ಕೆ. ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ವಿನಯ ಆಚಾರ್, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಮಂಜುನಾಥ್ ರೇವಣಕರ್, ಹಿಂದು ವಿದ್ಯಾದಾಯಿನಿ ಸಂಘದ ಜೊತೆ ಕಾರ್ಯದರ್ಶಿ ಎಂ. ಜಿ. ರಾಮಚಂದ್ರ ಉಪಸ್ಥಿತರಿರುತ್ತಾರೆ. ಕೃಷ್ಣಮೂರ್ತಿ ಚಿತ್ರಾಪುರ ಇವರು ಇಂದಿರಾ ಹೆಗ್ಗಡೆ ಅವರ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಲಾವಣ್ಯ ಹಾಗು ಬಳಗದವರಿಂದ ಗೀತಾ ಗಾಯನ ನಡೆಯಲಿದೆ.
ಅನುರಾಧ ರಾಜೀವ್ ಸಂಯೋಜನೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಸಾಹಿತ್ಯಾಭಿಮಾನಿಗಳು ಈ “ಸಾಹಿತ್ಯ ಸಂಭ್ರಮ”ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುರತ್ಕಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಗುಣವತಿ ರಮೇಶ್ ಕೋರಿದ್ದಾರೆ.