Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕರಂದಕ್ಕಾಡಿನ ಪದ್ಮಗಿರಿಯಲ್ಲಿ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’
    Cultural

    ಕರಂದಕ್ಕಾಡಿನ ಪದ್ಮಗಿರಿಯಲ್ಲಿ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’

    January 11, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು ಇದರ ಅಂಗಸಂಸ್ಥೆಯಾದ ಮಹಿಳಾ ಘಟಕ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’ಯು ದಿನಾಂಕ 31-12-2023ರಂದು ಕರಂದಕ್ಕಾಡಿನ ಪದ್ಮಗಿರಿಯ ಕಲಾಕುಟೀರದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ಹಾಗೂ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಮಾತನಾಡಿ “ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ತರುವ ಮೂಲಕ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ನಾರಿ ಚಿನ್ನಾರಿ ಒಳಧ್ವನಿಗೊಂದು ರಹದಾರಿ.” ಎಂದು ಹೇಳಿದರು.

    ನಾರಿ ಚಿನ್ನಾರಿಯ ಉಪಾಧ್ಯಕ್ಷೆ ಸಾಹಿತಿ ಯು. ಮಹೇಶ್ವರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಸನ್ನಾ ವಿ. ಚೆಕ್ಕೆಮನೆ ಅವರನ್ನು ಗೌರವಿಸಲಾಯಿತು. ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ‘ಯೋಗ ಮತ್ತು ನ್ಯಾಚುರೋಪತಿ’ ಎಂಬ ವಿಷಯದಲ್ಲಿ ಡಾ. ಅಂಕಿತಾ ಕಿಣಿ ಮಾಹಿತಿ ನೀಡಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ‘ಬಹುಭಾಷಾ ಕವಿಗೋಷ್ಠಿ’ಯಲ್ಲಿ ಪದ್ಮಾವತಿ ಏದಾರು ಹಾಗೂ ನಿರ್ಮಲಾ ಶೇಷಪ್ಪ ತುಳುವಿನಲ್ಲಿ, ಸುಮಿತ್ರಾ ಏರ್ಪಕಟ್ಟೆ, ಸೌಮ್ಯಾ ಪ್ರವೀಣ್, ಕವಿತಾ ಕೂಡ್ಲು ಹಾಗೂ ಜುಲೇಖಾ ಮಾಹಿನ್ ಕನ್ನಡದಲ್ಲಿ, ಅನ್ನಪೂರ್ಣ ಬೆಜಪ್ಪೆ, ಪ್ರಮೀಳಾ ಚುಳ್ಳಿಕ್ಕಾನ ಹಾಗೂ ಧನ್ಯಶ್ರೀ ಸರಳಿ ಹವ್ಯಕ ಕನ್ನಡದಲ್ಲಿ , ಪ್ರಭಾವತಿ ಕೆದಿಲ್ಲಾಯ ಹಾಗೂ ವಸಂತ ಲಕ್ಷ್ಮೀ ಪುತ್ತೂರು ಶಿವಳ್ಳಿ ತುಳುವಿನಲ್ಲಿ, ಸೌಮ್ಯ ಗುರು ಕಾರ್ಲೆ ಹಾಗೂ ಜ್ಯೋತ್ಸ್ನಾ ಕಡೆಂದೇಲು ಕರಾಡ ಭಾಷೆಯಲ್ಲಿ, ವಿಜಯಲಕ್ಷ್ಮಿ ಶಾನುಭೋಗ್ ಸ್ಥಾನಿಕ ತುಳುವಿನಲ್ಲಿ, ಚೇತನಾ ಕುಂಬ್ಳೆ, ಕವಿತಾ ಎಂ.ಚೆರ್ಕಳ, ಶರಣ್ಯಾ ನಾರಾಯಣನ್ ಮಲಯಾಳಂನಲ್ಲಿ, ಲಕ್ಷ್ಮೀ. ಕೆ ತಮಿಳು ಮತ್ತು ತೆಲುಗುವಿನಲ್ಲಿ, ಶಕುಂತಳಾ ಆರ್. ಕಿಣಿ ಕೊಂಕಣಿಯಲ್ಲಿ, ದಿವ್ಯಾ ಗಟ್ಟಿ ಪರಕ್ಕಿಲ ಇಂಗ್ಲೀಷಿನಲ್ಲಿ, ಸರ್ವಮಂಗಳಾ ಜಯ್ ಪುಣಿಚಿತ್ತಾಯ ಹಿಂದಿಯಲ್ಲಿ ಹಾಗೂ ಶರ್ಮಿಳಾ ಬಜಕೋಡ್ಲು ಮರಾಠಿಯಲ್ಲಿ ಕವನಗಳನ್ನು ವಾಚಿಸಿದರು. ಕೊರತಿ ಪಿ. ಪಡ್ರೆ ಮತ್ತು ಶ್ರೀಲತಾ ವೈ. ‘ಅಜ್ಜಿ ಕತೆ’ಗಳನ್ನು ವಾಚಿಸಿ, ರಾಧಾ ಮುರಳೀಧ‌ರ್, ಪ್ರತಿಜ್ಞಾ ರಂಜಿತ್, ಹರಿಣಾಕ್ಷಿ ಭೋಜ ರಾವ್ಸ ಮತ್ತಿ ರಸ್ವತಿ ಮಧೂರು ಅವರಿಂದ ‘ಕಾವ್ಯ ಗಾಯನ’ ನಡೆಯಿತು. ನಾರಿ ಚಿನ್ನಾರಿ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಲತಾ ಮೈಲಾಟಿ ಸ್ವಾಗತಿಸಿ, ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಸರ್ವಮಂಗಳಾ ಜಯ ಪುಣಿಚಿತ್ತಾಯ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಸ್ವರಾನಂದ ಪ್ರತಿಷ್ಠಾನ’ದಿಂದ ಅಹೋರಾತ್ರಿ ನಾದಾನುಭವ
    Next Article ‘ಅಂತಾರಾಷ್ಟ್ರೀಯ ಪತ್ರಿಕಾ ಸಾಧಕ ಪ್ರಶಸ್ತಿ’ಗೆ ರವಿ ನಾಯ್ಕಾಪು ಆಯ್ಕೆ
    roovari

    Add Comment Cancel Reply


    Related Posts

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.