ಅನಂತಪುರ : ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಅನಂತಪುರ ಇದರ ಶ್ರೀ ಅನಂತಶ್ರೀ ಸಭಾಭವನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ದಿನಾಂಕ 14 ಸೆಪ್ಟೆಂಬರ್ 2026ರಂದು ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
40ಕ್ಕೂ ಅಧಿಕ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಕಲಾವಿದರಿಂದ 4-00 ಗಂಟೆಗೂ ಮಿಕ್ಕಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕೃಷ್ಣ ಅನಂತಪುರ ಸ್ವಾಗತಿಸಿದರು. ಡಾ. ವಾಣಿಶ್ರೀ ಕಾಸರಗೋಡು ಅವರು ಸಂಯೋಜಿಸಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಕುಣಿತ ಭಜನೆ, ಕರೋಕೆ ಗಾಯನ, ವೈಯಕ್ತಿಕ ಗಾಯನ ಮತ್ತು ವಿವಿಧ ಪ್ರಕಾರದ ನೃತ್ಯಗಳು ಹೊಸ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿತು. ಡಾ. ವಾಣಿಶ್ರೀ ಕಾಸರಗೋಡು ಗಣೇಶ ಚತುರ್ಥಿಯ ಆಚರಣೆಯ ವೈಶಿಷ್ಟ್ಯ ಹಾಗೂ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳ ಔಚಿತ್ಯದ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಇವರನ್ನು ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಅದ್ಭುತ ಪ್ರದರ್ಶನ ನೀಡಿದ ಕಲಾವಿದರಾದ ಸೀತಾರಾಮ, ದಿವಾಕರ, ಅಮೃತ್, ತೇಜಸ್ವಿನಿ, ಮನೀಶ್, ಸೌಮ್ಯ, ಐಶ್ವರ್ಯ, ಕೃಪಾಶ್ರೀ, ಮನ್ವಿತ್, ಲಾವಣ್ಯ, ಕೌಶಿಕ್, ಹರ್ಷಿತಾ, ಶನ್ವಿತ್, ಶ್ರೀಕಾಂತ್, ಕೃಪಾ, ಪ್ರಣಯ, ಗ್ರೀಷ್ಮ, ಹರ್ಷಿಕಾ, ತನ್ವಿತಾ, ಶಾನ್ವಿ, ತೃಪ್ತಿ, ಸಂಪ್ರಿತಾ, ತೇಜಸ್ವಿ, ಜಯಸೂರ್ಯ, ಸ್ನೇಹಾ, ಕೃತಿ, ಅಚ್ಚುತ ಭಟ್, ಸಾನ್ವಿ, ಸೌಪರ್ಣಿಕಾ, ರಿಷಿಕಾ, ಕೃತಿಕಾ, ಶ್ರೀಲತಾ, ಭೂಮಿಕಾ, ಪ್ರತಿಕ್ಷಾ, ಜಾನ್ವಿ ಇವರನ್ನು ಭವ್ಯ ವೇದಿಕೆಯಲ್ಲಿ ಗೌರವ ಸ್ಮರಣಿಕೆಗಳು, ಆಕರ್ಷಕ ಪದಕಗಳು ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಸಾಹಿತ್ಯ ಗಾನ ನೃತ್ಯ ವೈಭವ ಜನರ ಪ್ರೀತಿಗೆ ಪಾತ್ರರಾಗುದರೊಂದಿಗೆ ಅನೇಕ ಹೊಸತನದ ಆಯಾಮಗಳಿಗೆ ನಾಂದಿ ಹಾಡಿತು. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಭಕ್ತಿ ಪ್ರಧಾನ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಚೌತಿ ಹಬ್ಬದ ಮೆರುಗನ್ನು ಹೆಚ್ಚಿಸಿತು.
