ದಾವಣಗೆರೆ : ಗದಗಿನ ಡಾ. ವ್ಹಿ.ಬಿ. ಹಿರೇಮಠದ ಮಹಾ ವೇದಿಕೆ, ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ 3ನೇ ಸಾಹಿತ್ಯ ಸಮ್ಮೇಳನ ಹಾಗೂ ಡಾ. ವ್ಹಿ.ಬಿ. ಹಿರೇಮಠರವರ 11ನೇ ಪುಣ್ಯಸ್ಮರಣೆ ಮತ್ತು 78ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ದಿನಾಂಕ 3 ನವಂಬರ್ 2024ರಂದು ಭಾನುವಾರ ಗದುಗಿನ ಶ್ರೀರಾಮ ಬಂಜಾರ ಭವನದಲ್ಲಿ ‘ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ’ ಎಂದೇ ಪ್ರಖ್ಯಾತರಾದ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಸಾಮಾಜಿಕ ಕಾಳಜಿಯ ಆಧ್ಯಾತ್ಮ ಪರಂಪರೆಯ ಸಾಧನೆಗಳನ್ನು ಗುರಿತಿಸಿ, ಸಾಲಿಗ್ರಾಮ ಗಣೇಶ್ ಶೆಣೈ ಇವರನ್ನು ‘ಪಂಡಿತ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮತಿ ಡಾ. ವ್ಹಿ.ಬಿ. ಹಿರೇಮಠ ತಿಳಿಸಿದ್ದಾರೆ.
ನಿರಂತರವಾಗಿ ಪ್ರಶಸ್ತಿಗಳ ಸರಮಾಲೆಯನ್ನು ಮುಡಿಗೇರಿಸಿಕೊಳ್ಳುವ ಶೆಣೈಯವರಿಗೆ ಕಲಾಕುಂಚ, ಯಕ್ಷರಂಗ, ಕರ್ನಾಟಕ ಸುಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ. ಸಿನಿಮಾಸಿರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಅನೇಕ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.