Subscribe to Updates

    Get the latest creative news from FooBar about art, design and business.

    What's Hot

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಲಿಗ್ರಾಮದಲ್ಲಿ ‘ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ’
    Awards

    ಸಾಲಿಗ್ರಾಮದಲ್ಲಿ ‘ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ’

    May 22, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಲಿಗ್ರಾಮ : ಕರ್ನಾಟಕ ಯಕ್ಷಧಾಮ, ಮಂಗಳೂರು ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನವು ದಿನಾಂಕ : 22-05-2023, ಸೋಮವಾರ ಸಂಜೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ, ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು ನೆರವೇರಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀ ಸುದರ್ಶನ ಉರಾಳರನ್ನು ಮಂಗಳೂರಿನ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಇವರು ಸನ್ಮಾನಿಸಲಿರುವರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಲಾ ಸಾಹಿತಿ ಶ್ರೀ ಎಚ್. ಜನಾರ್ದನ ಹಂದೆ ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಇವರು ಭಾಗವಹಿಸಲಿದ್ದಾರೆ.

    ಸಭಾ ಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗ (ರಿ) ಹಾಲಾಡಿ ಇವರಿಂದ ‘ಆದರ್ಶ ಪುತ್ರ ಭೀಷ್ಠ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಿ. ರಾಘವೇಂದ್ರ ಮಯ್ಯ ಹಾಲಾಡಿ, ಮದ್ದಳೆಯಲ್ಲಿ ರಾಘವೇಂದ್ರ ಹೆಗ್ಡೆ ಯಲ್ಲಾಪುರ, ಚಂಡೆಯಲ್ಲಿ ಸುಜನ್ ಹಾಲಾಡಿ ಹಾಗೂ ಮುಮ್ಮೇಳದಲ್ಲಿ ಶಾಂತನು ಆಗಿ ಸುಜಯೀಂದ್ರ ಹಂದೆ, ಕಂದರನಾಗಿ ರವೀಂದ್ರ ದೇವಾಡಿಗ ಕಮಲಶಿಲೆ, ದೇವವ್ರತನಾಗಿ ಕೋಟ ಸುರೇಶ ಬಂಗೇರ, ಯೋಜನಗಂಧಿಯಾಗಿ ಮಾಧವ ನಾಗೂರು, ಮಂತ್ರಿಯಾಗಿ ಸೀತರಾಮ್ ಹೆಗ್ಡೆ ಶಿರಸಿ ರಂಜಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಇನಾಂದಾರ್ ಪ್ರಶಸ್ತಿಗೆ ಡಿ.ಎ.ಶಂಕರ್ ಮತ್ತು ಆರ್. ತಾರಿಣಿ ಶುಭದಾಯಿನಿ ಆಯ್ಕೆ 
    Next Article ಕಲಾವಿದರಿಗೆ ಆರ್ಥಿಕ ಭದ್ರತೆ ದೊರಕಿಸಲು ಸರ್ಕಾರಿ ಉದ್ಯೋಗಗಳ ಸೃಷ್ಟಿ ಸಾಧ್ಯವಿಲ್ಲವೇ?
    roovari

    Add Comment Cancel Reply


    Related Posts

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    ಉಡುಪಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ಕಲಾಯತನ’ ಸಾಹಿತ್ಯ ಯಕ್ಷ ಸಂಭ್ರಮ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.