Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’
    Cultural

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’

    June 12, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡಬಿದಿರೆ : ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2024′ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ ಹಾಗೂ ರಂಗಕರ್ಮಿ ಅರುಣ್ ಸಾಗರ್ ತಮ್ಮ ಕಂಚಿನ ಕಂಠದಲ್ಲಿ ‘ವಿದ್ಯಾ ಬುದ್ಧಿ ಕಲಿಸಿದ ಗುರುವೇ ಕೊಡು ನಮಗೆ ಮತಿಯ…’ ಸಾಲುಗಳನ್ನು ಹಾಡುತ್ತಲೇ ತಮ್ಮ ಮಾತಿಗೆ ಚಾಲನೆ ನೀಡಿ “ಆಳ್ವಾಸ್‌ನಲ್ಲೇ ಒಂದು ನಾಡು, ಒಂದು ದೇಶ ಇದೆ. ದೇಶದ ಬೇರೆಡೆ ಇಲ್ಲದ ಗುರುಕುಲ ಆಳ್ವಾಸ್. ಮನಸ್ಸಿನೊಳಗೆ ಮಗುತನ ಇದ್ದರೆ ಮಾತ್ರ ದೊಡ್ಡ ಮನುಷ್ಯನಾಗಲು ಸಾಧ್ಯ. ನಾವೆಲ್ಲ ಮನುಷ್ಯರಾಗೋಣ. ಮನುಷ್ಯತ್ವದ ಮಹಲು ಕಟ್ಟುತ್ತಿರುವ ಮೋಹನ ಆಳ್ವರ ಜೊತೆಯಾಗೋಣ. ಆಳ್ವಾಸ್ ವಿದ್ಯಾರ್ಥಿ ಶಿಲ್ಪಗಳನ್ನು ಕೆತ್ತುವ ತಾಣವಾಗಿದೆ. ಇಲ್ಲಿ ಆಳ್ವರು ಮನುಷ್ಯತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ಊರು ಚಿಕ್ಕದಾದರು ದೊಡ್ಡ ಮನಸ್ಸಿನ ಪ್ರಪಂಚ. ಸಾಹಿತ್ಯ, ಕಲೆ, ಕ್ರೀಡೆ ಹಾಗೂ ಶಿಕ್ಷಣಗಳಿಗೆ ಪ್ರೋತ್ಸಾಹಿಸುವ ಆಳ್ವರು ಹಿರೋಗಿಂತ ದೊಡ್ಡ ಹೀರೋ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ‘ಮನುಷ್ಯ ತಾನೊಂದು ಕುಲಂ’ ಎಂಬ ಸಾರ್ಥಕತೆ ನಮ್ಮಲ್ಲಿ ಮೂಡಬೇಕು. ಬಸವಣ್ಣನವರು ಹೇಳಿದಂತೆ ‘ಇವನಾರವ ಇವನಾರವನೆಂದೆನಿಸದಿರಯ್ಯಾ…’ ಎಂದು ಬಾಳಬೇಕು. ಆಳ್ವರ ಸಮಯ ಪ್ರಜ್ಞೆ ಬಗ್ಗೆ ಗೌರವವಿದೆ. ಅವರದ್ದು ಅನುಭವ ಅನುಭಾವವಾಗಿಸಿದ ವ್ಯಕ್ತಿತ್ವ. ಕಲಿಕೆ, ಕನಸು, ನನಸು ಅವರ ಹಾದಿ. ನಾವೆಲ್ಲ ಒಳ್ಳೆ ಮನುಷ್ಯರಾಗಲು ಕಲಿಯೋಣ. ಆಳ್ವರು ಸಾಮ್ರಾಜ್ಯ ಸ್ಥಾಪಿಸುವ ಬದಲಾಗಿ ಹೃದಯ ಆಳಿದರು. ಅವರದ್ದು ಹೃದಯದ ರಿಯಲ್ ಎಸ್ಟೇಟ್. ಮಗುವಿಗೆ ಜ್ಞಾನ ನೀಡಿ ಹೃದಯ ಭಾವನೆ ಅರಳಿಸುವುದು ಶಿಕ್ಷಣ. ಒಳ್ಳೆಯವರಾಗಿ ಬದುಕುವುದೇ ಸಂಸ್ಕೃತಿ. ಜೀವನದಲ್ಲಿ ಪಾಸು ಫೇಲ್ ಇಲ್ಲ, ಪ್ರತಿ ಕ್ಷಣವೂ ಪರೀಕ್ಷೆ. ನಿಮ್ಮ ಊರಿಗೆ ನೀವು ಆಳ್ವರಾಗಿ. ದಾರಿ ತಪ್ಪಿಸಿ ಆಳುವ ಮಂದಿಯ ಅನುಯಾಯಿ ಆಗಬೇಡಿ. ನಿಮ್ಮನ್ನು ನೀವು ಆಳುವವರಾಗಿ.” ಎಂದರು.


    ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ “ಇಲ್ಲಿ ನಡೆಯುವ ಪ್ರತಿ ಕಾರ್ಯವೂ ಅನನ್ಯ. ನಾನು 8 ವರ್ಷಗಳ ಹಿಂದೆ ಆಳ್ವಾಸ್‌ಗೆ ಬಂದಿದ್ದೆ. ಈಗ ಬೃಹತ್ ಆಗಿ ಬೆಳೆದು ನಿಂತಿದೆ. ದೇಶದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ.” ಎಂದರು.
    ರೇಸರ್ ಅರವಿಂದ ಕೆ. ಪಿ. , ನಟಿ ಚೈತ್ರಾ ಶೆಟ್ಟಿ, ನಟಿ ವಿಜೇತಾ ಪೂಜಾರಿ, ನಟ ಮೈಮ್ ರಾಮದಾಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.
    ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಪಿಲಿ ನಲಿಕೆ, ನಿಹಾಲ್ ತಾವ್ರೋರಿಂದ ಹಾಡುಗಳ ಕಾರ‍್ಯಕ್ರಮ, ಬೀದಿ ಪ್ರದರ್ಶನ, ಫೈರ್ ಡ್ಯಾನ್ಸ್, ಕನ್ನಡ ಕಾಮೆಡಿ, ಬೀಟ್ ಗುರು ತಂಡದ ಕಾರ‍್ಯಕ್ರಮ, ಆಹಾರ ಮೇಳ, ಕಲಾ ಪ್ರದರ್ಶನಗಳಿಂದ ಕಾರ್ಯಕ್ರಮ ಕಂಗೊಳಿಸಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
    ಇದೇ ಸಂದರ್ಭದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದ ಪರಿಚಯ ಕಾರ್ಯಕ್ರಮ ನಡೆಯಿತು. ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನಿಯಾ ಅಯ್ಯರ್, ನಟಿ ಮಾನಸಿ ಸುಧೀರ್, ಸೃಜನಾ ಉಪಸ್ಥಿತರಿದ್ದರು. ಗಾಯಕ ನಿಹಾಲ್ ತಾವ್ರೋ ಹಾಡಿ ರಂಜಿಸಿದರು. ಸಭಾ ಕಾರ‍್ಯಕ್ರಮವನ್ನು ನಿತೇಶ್ ಮಾರ್ನಾಡ್ ಹಾಗೂ ನಂತರದ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಅವಿನಾಶ್ ಕಟೀಲ್ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಜನರ ಮನಗೆದ್ದ ” ಅ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ “
    Next Article ಕಾರಡ್ಕ ಶಾಲೆಯಲ್ಲಿ ಕಯ್ಯಾರ ಜನ್ಮದಿನಾಚರಣೆ
    roovari

    Add Comment Cancel Reply


    Related Posts

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಹಬ್ಬ’ | ಮೇ 20  

    May 19, 2025

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.