ಮೂಡುಬಿದಿರೆ : ಸುರಸಾರವ ಸಂಗೀತ ಶಾಲೆಯ ವತಿಯಿಂದ ದ್ವಿತೀಯ ವರ್ಷದ ‘ಸಂಗೀತೋತ್ಸವ-2026’ ದಣಿದ ದನಿಗೆ ರಾಗದ ಬೆಸುಗೆ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2026ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದೆ.
ಸಂಸ್ಥೆಯ ಅತ್ಯುನ್ನತ ಪುರಸ್ಕಾರವಾದ ‘ಸುರಸಾರವ ಕಲಾವಿಭೂಷಣ’ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀಪತಿ ಭಟ್ ಇವರಿಗೆ ನೀಡಿ ಗೌರವಿಸಲಾಗುವುದು. ಉಡುಪಿಯ ಶ್ರೀಮತಿ ಪೂರ್ಣಿಮಾ, ವೇದಮೂರ್ತಿ ಶಶಿಧರ್ ಪುರೋಹಿತ್ ಕಟಪಾಡಿ, ಆಲ್ವಿನ್ ಅಂದ್ರಾದೆ ಸಾಸ್ತಾನ ಮತ್ತು ಸುಶಾಂತ್ ಭಂಡಾರಿ ಮಂಗಳೂರು ಇವರಿಗೆ ‘ಸುರಸಾರವ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಮುಲ್ಕಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಮತ್ತಿತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 1-45ರಿಂದ ಶಾರದಾ ಪೂಜೆ, ಗುರುವಂದನೆ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕಿಶೋರ್ ಕುಮಾರ್ ಅವರ ಗೀತೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿದ ಪ್ರತಿಭೆಗಳಿಗೆ ಹಾಗೂ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವ ವಂದನೆ ಸಲ್ಲಿಸಲಾಗುವುದು. ಭಾಸ್ಕರ ಆಚಾರ್ಯ ಬಸ್ರೂರು ಇವರು ಹಿನ್ನೆಲೆ ವಾದನ ಸಹಕಾರ, ಸಂತೋಷ್ ರಿದಂ ಪ್ಯಾಡ್, ಪ್ರದೀಪ್ ತಬಲಾ ಮತ್ತು ಸಂತೋಷ್ ವಿಟ್ಲ ಇವರುಗಳು ಹಿಮ್ಮೇಳನದಲ್ಲಿ ಸಹಕರಿಸಲಿದ್ದಾರೆ.


