Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸಂಸ್ಥೆಯ ಉದ್ಘಾಟನೆ
    Cultural

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸಂಸ್ಥೆಯ ಉದ್ಘಾಟನೆ

    January 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಹಕಾರದೊಂದಿಗೆ ‘ಶ್ರೀ ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸಂಸ್ಥೆಯ ಉದ್ಘಾಟನಾ ಸಮಾರಂಭವು ದಿನಾಂಕ 26-11-2023 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ “ವಿವಿಧ ಕಲೆಗಳಿಂದ ಕೂಡಿದ ಉಡುಪಿ, ಕಲಾ ವಿಭಾಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದೆ. ಕುಟುಂಬದಲ್ಲಿ ಒಂದೆರಡು ಮಕ್ಕಳನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ ಓದು ಮತ್ತು ಕಲೆ ಎರಡೂ ವಿಭಾಗದಲ್ಲಿ ಬೆಳೆಯುವಂತೆ ಪೋಷಕರು ಮಕ್ಕಳನ್ನು ಬೆಳೆಸುತ್ತಾರೆ. ಹಾಗಾಗಿ ಪ್ರತೀ ಕುಟುಂಬದಲ್ಲಿಯೂ ಬೇರೆ ಬೇರೆ ಕಲಾ ವಿಭಾಗದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಇಂದಿನ ಕಾಲಘಟ್ಟದಲ್ಲಿ ಕಾಣಬಹುದು. ಸಂಸ್ಕೃತಿ, ಸಂಸ್ಕಾರಗಳು ಕಲಾ ಚಟುವಟಿಕೆಯಿಂದ ವೃದ್ಧಿಸುತ್ತದೆ.” ಎಂದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಶ್ರೀಮತಿ ಪಾರ್ವತಿ ಜಿ. ಐತಾಳ್ ಮಾತನಾಡಿ “ತೆಕ್ಕಟ್ಟೆಯ ಪರಿಸರಕ್ಕೆ ಸಾಂಸ್ಕೃತಿಕ ರಾಯಭಾರತ್ವಕ್ಕೆ ಇನ್ನೊಂದು ಸಂಸ್ಥೆ ‘ಸರಸ್ವತಿ ಲಲಿತಕಲಾ ಟ್ರಸ್ಟ್, ಮಣೂರು’ ಸೇರಿಕೊಂಡಿದೆ. ಸಂಸ್ಕೃತಿಯನ್ನು ಮನದಟ್ಟು ಮಾಡುವ ಮತ್ತು ಸಂಸ್ಕಾರದ ಚಿತ್ರಣವನ್ನು ಬಿತ್ತರಿಸುವ ಕಾರ್ಯವನ್ನು ಕಲೆ ಮಾಡಿದೆ. ಆದರೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಕಲೆಗೆ ಅವಕಾಶವಿಲ್ಲ. ಕಲೆಗೆ ಮಹತ್ವ ಬರಬೇಕಾದರೆ ಅದು ಶೈಕ್ಷಣಿಕದ ಭಾಗವಾಗಬೇಕಾಗುತ್ತದೆ. ಖಾಸಗಿ ಶಾಲೆಗಳು ಕಲೆಗೆ ಮಹತ್ವ ನೀಡುತ್ತಿದ್ದರೂ ಅದು ಪ್ರಾಮುಖ್ಯವಾಗಿ ನೆಲೆನಿಂತಿಲ್ಲ. ಕಲೆಗೆ ಶಾಲೆಗಳಲ್ಲಿ ಪ್ರಾತಿನಿಧ್ಯ ದೊರೆಯಬೇಕು.” ಎಂದು ಅಭಿಪ್ರಾಯಪಟ್ಟರು.

    ಯಕ್ಷಗುರುಗಳಾದ ಲಂಬೋದರ ಹೆಗಡೆ, ಡಾ. ವಾಸುದೇವ ಹೊಳ್ಳ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಹೊಳ್ಳ ಸ್ವಾಗತಿಸಿ, ಕು. ನೇಹ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.

     

    Share. Facebook Twitter Pinterest LinkedIn Tumblr WhatsApp Email
    Previous Articleಸೋಮವಾರಪೇಟೆಯಲ್ಲಿ ‘ಗೀತಗಾಯನ ಮತ್ತು ಕವಿಗೋಷ್ಠಿ’
    Next Article ಮಣಿಪಾಲದಲ್ಲಿ ‘ಪ್ರಮಾ ಪ್ರಶಸ್ತಿ 2023’ ಪ್ರದಾನ
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    ಬೆಂಗಳೂರು ಅಲಯೆನ್ಸ್ ವಿಶ್ವವಿದ್ಯಾನಿಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ – ವಿಚಾರಗೋಷ್ಠಿ

    July 15, 2026

    ಯಕ್ಷನಂದನ ವರ್ಷಾಚರಣೆಯಲ್ಲಿ ಆಂಗ್ಲ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.