Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಸಂಗೀತ ನೃತ್ಯ ವಿಚಾರ ಸಂಕಿರಣ’ ಸಂಭ್ರಮ -2026 | ಫೆಬ್ರವರಿ 14

    February 13, 2026

    ಹಿರಿಯ ಜಾದೂಗಾರ ಪ್ರೊ. ಮಾಧವ್ ಅಸ್ತಂಗತ

    February 13, 2026

    ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

    February 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿರಿಯ ಜಾದೂಗಾರ ಪ್ರೊ. ಮಾಧವ್ ಅಸ್ತಂಗತ
    Magic

    ಹಿರಿಯ ಜಾದೂಗಾರ ಪ್ರೊ. ಮಾಧವ್ ಅಸ್ತಂಗತ

    February 13, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರ್ನಾಟಕ ಹಾಗೂ ಕೇರಳದ ಜಾದೂ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದ, ನಾರ್ತ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಹಿರಿಯ ಜಾದೂಗಾರ ಪ್ರೊ. ಮಾಧವರವರು (73 ವರ್ಷ) ದಿನಾಂಕ 13 ಫೆಬ್ರವರಿ 2026ರಂದು ಬೆಳಗ್ಗೆ ನಿಧನರಾಗಿದ್ದಾರೆ.

    ನಾರ್ತ್ ಮಲಬಾರ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಿಸಿದ್ದ ಪ್ರೊ. ಮಾಧವರು ಜಾದೂ ಕಲೆಯಲ್ಲಿ ವೃತ್ತಿಪರ ಜಾದೂಗಾರರನ್ನು ಮೀರಿಸುವ ಪರಿಣಿತಿಯನ್ನು ಹೊಂದಿದ್ದರು. 15 ಕಲಾವಿದರ ‘ಮಾಯ ರಂಜಿನಿ’ ತಂಡವನ್ನು ಕಟ್ಟಿ, ಅಪಾರ ಪ್ರಮಾಣದ ಇಲ್ಲ್ಯುಷನ್ ಜಾದೂ ಸಾಮಾಗ್ರಿಗಳನ್ನು ಬಳಸಿ ಕರ್ನಾಟಕ ಹಾಗೂ ಕೇರಳದ ವಿವಿಧೆಡೆ ಸುಮಾರು ಐದು ದಶಕಗಳ ಕಾಲ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ.

    ಉತ್ತಮ ವಾಗ್ಮಿಯಾಗಿ, ಜಾದೂ ಕ್ಷೇತ್ರದ ಅಪಾರ ಅನುಭವ ಹಾಗೂ ಜ್ಞಾನವನ್ನು ಹೊಂದಿದ್ದ ಪ್ರೊ. ಮಾಧವರು ನಾರ್ತ್ ಮಲಬಾರ ಮ್ಯಾಜಿಕ್ ಫೌಂಡೇಷನ್ ಸಂಘಟನೆಯ ಮೂಲಕ ಜಾದೂ ಕ್ಷೇತ್ರದ ಉನ್ನತಿಗೆ ಶ್ರಮಿಸಿದ್ದರು. ಮಂಗಳೂರಿನ ಜಾದೂ ಸಂಘಟನೆ ಮಂಗಳಾ ಮ್ಯಾಜಿಕ್ ಸರ್ಕಲ್ ಇದರ ಸ್ಥಾಪಕ ಸದಸ್ಯರಾಗಿದ್ದರು. ಕಿರಿಯ ಜಾದೂಗಾರನಾಗಿ ರಾಷ್ಟ್ರದ ಗಮನ ಸೆಳೆದಿದ್ದ ದಿವಂಗತ ಮಾಸ್ಟರ್ ಚಿಂತನ್ ಇವರ ಪುತ್ರನಾಗಿದ್ದ. ಕೇರಳ ಕಾಸರಗೋಡಿನ ಉಬ್ರಂಗಳ ನಿವಾಸಿಯಾಗಿದ್ದ ಪ್ರೊ. ಮಾಧವರು ಕೂಡ್ಲು ಗ್ರಾಮದಲ್ಲಿ ನೆಲೆಸಿದ್ದರು. ಪತ್ನಿ ಜಯಶ್ರೀ, ಪುತ್ರ ಖ್ಯಾತ ಫೊಟೋ ಜರ್ನಲಿಸ್ಟ್ ಚೇತನ್, ಪುತ್ರಿಯರಾದ ಚೈತ್ರ ಮತ್ತು ಚೇತಸ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

    baikady Magic roovari
    Share. Facebook Twitter Pinterest LinkedIn Tumblr WhatsApp Email
    Previous Articleಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
    Next Article ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಸಂಗೀತ ನೃತ್ಯ ವಿಚಾರ ಸಂಕಿರಣ’ ಸಂಭ್ರಮ -2026 | ಫೆಬ್ರವರಿ 14
    roovari

    Add Comment Cancel Reply


    Related Posts

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಸಂಗೀತ ನೃತ್ಯ ವಿಚಾರ ಸಂಕಿರಣ’ ಸಂಭ್ರಮ -2026 | ಫೆಬ್ರವರಿ 14

    February 13, 2026

    ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

    February 13, 2026

    ಸಂಗೀತ ವಿಮರ್ಶೆ | ಶ್ರೋತೃಗಳನ್ನು ಸೆಳೆದ ಸಾಯಿ ವಿಘ್ನೇಶ್ ಹಾಡುಗಾರಿಕೆ

    February 13, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.