ಅಂಕೋಲಾ : ವಯೋಸಹಜ ಖಾಯಿಕೆಯಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ವಿಷ್ಣು ನಾಯ್ಕ (81) ದಿನಾಂಕ 17-02-2024ರ ಶನಿವಾರ ರಾತ್ರಿ ನಿಧನರಾದರು. ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಬ್ಬರು ಪುತ್ರಿಯರು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.
ಅಂಕೋಲಾ ತಾಲೂಕಿನ ಅಂಬಾರಕೊಡ್ಲದಲ್ಲಿ 07-07-1944ರಂದು ಜನಿಸಿದ ವಿಷ್ಣು ನಾಯ್ಕ ಪ್ರಾಚಾರ್ಯರಾಗಿದ್ದರು. ಯಕ್ಷಗಾನ ಕಲಾವಿದರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ್ದಾರೆ. 1973ರಲ್ಲಿ ರಾಘವೇಂದ್ರ ಪ್ರಕಾಶನ ಪ್ರಾರಂಭಿಸಿ 180ಕ್ಕೂ ಅಧಿಕ ಗ್ರಂಥ ಪ್ರಕಟಿಸಿರುವುದು ವಿಶೇಷ.
60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಇವರು, ವಾರಪತ್ರಿಕೆಯೊಂದನ್ನು ಪ್ರಕಟಿಸುತ್ತಿದ್ದರು. ಭಾವಗೀತೆಗಳ ‘ಸ್ವಂತಿಕೆ’ ಧ್ವನಿಸುರುಳಿ ಹೊರತಂದಿದ್ದ ವಿಷ್ಣು ನಾಯ್ಕ ಸಾಹಿತಿ ಡಾ. ದಿನಕರ ದೇಸಾಯಿ ಅವರೊಂದಿಗೆ ರೈತ ಜನಾಂದೋಲನದಲ್ಲೂ ಪಾಲ್ಗೊಂಡಿದ್ದರು.