ಬೆಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ (ನೋಂ) ಪ್ರದರ್ಶಕ ಕಲಾವಿಭಾಗ ಅರ್ಪಿಸುವ ‘ಶತಾಬ್ದಿ ನಾದ ನೈವೇದ್ಯ’ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಬಸವನ ಗುಡಿಯಲ್ಲಿರುವ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿ ಆಡಿಟೋರಿಯಂನಲ್ಲಿ ಆಯೋಜಸಲಾಗಿದೆ.
ಮಧುರ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಧ್ಯೇಯಗೀತೆ ಪ್ರಸ್ತುತಗೊಳ್ಳಲಿದ್ದು, ಗಾಯನದಲ್ಲಿ ನ. ನಾಗರಾಜ, ರಾಜೀವ್ ಅಗಲಿ, ಹರ್ಷ ಕೌಂಡಿನ್ಯಾ, ರಾಜೇಶ್ ಕುಮಾರ್ ಬಿ.ಎಸ್., ಡಾ. ಪದ್ಮಿನಿ ಎಲ್.ಓಕ್., ರಜನಿ ಬಿ.ಸಿ., ಲಕ್ಷ್ಮಿ ವಿಜಯ್, ಚಾಂದನಿ ಗರ್ತಿಕೆರೆ, ಸುನಯನ ಇವರುಗಳು ಭಾಗವಹಿಸಲಿದ್ದು, ತಬಲಾದಲ್ಲಿ ಮಧುಸೂದನ್ ಮತ್ತು ಸುದತ್ತ, ಸಿತಾರ್ ಸುಬ್ರಹ್ಮಣ್ಯ ಹೆಗಡೆ, ಕೊಳಲು ಗಣೇಶ್ ಕೆ.ಎಸ್., ಕೀಬೋರ್ಡ್ ಉಮೇಶ್ ಸೃಷ್ಟಿ, ರಿದಮ್ ಪ್ಯಾಡ್ ಶ್ರೀನಿವಾಸ್ ಸೃಷ್ಟಿ ಹಾಗೂ ಗಿಟಾರ್ ವಿನಯ್ ಇವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.