ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶಿವಮೊಗ್ಗ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ ಇವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಇಪ್ಪತ್ತೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 08 ಜನವರಿ 2026ರಂದು ಬೆಳಗ್ಗೆ 10-30 ಗಂಟೆಗೆ ಶಿವಮೊಗ್ಗ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಕಾಂತ ಪಿ.ಬಿ. ಇವರು ಈ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಕುಮಾರಿ ಹಂಸಿಕಾ ಜೆ. ತಮ್ಮಡಿಹಳ್ಳಿ ಇವರು ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಆಶಯ ಮಾತುಗಳನ್ನಾಡಲಿದ್ದಾರೆ. ರಾಷ್ಟ್ರಕವಿ ಕುವೆಂಪು ಇವರು ಬರೆದ ‘ಬೊಮ್ಮನಹಳ್ಳಿಯ ಕಿಂದರ ಜೋಗಿ’ ಶತಮಾನದ ಸಂಭ್ರಮ ಪ್ರಯುಕ್ತ ಶಿವಮೊಗ್ಗ ಸಹ್ಯಾದ್ರಿ ರಂಗ ತರಂಗ ತಂಡದವರಿಂದ ಮಂಜುನಾಥ ತೇಜಸ್ವಿನಿ ಇವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕವಯತ್ರಿ ಕುಮಾರಿ ರುಕ್ಮಿಣಿ ಬಿ.ಎಲ್. ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಕಥೆಗಾರ್ತಿ ಕುಮಾರಿ ಕವಿತಾ ಸಿ. ಇವರ ಅಧ್ಯಕ್ಷತೆಯಲ್ಲಿ ಕಥಾ ಗೋಷ್ಠಿ, ಕುಮಾರಿ ಸಾಹಿತ್ಯ ಕೆ. ಇವರ ಅಧ್ಯಕ್ಷತೆಯಲ್ಲಿ ಪ್ರಬಂಧ ಗೋಷ್ಠಿ ನಡೆಯಲಿದೆ.

