ಸಾಣೇಹಳ್ಳಿ : ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘವು ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಸಾಧನೆಯನ್ನು ಗುರುತಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಈ ಬಾರಿ ಇಳಕಲ್ಲಿನ ಹಿರಿಯ ರಂಗಕರ್ಮಿ ಮಹಾಂತೇಶ್ ಎಂ. ಗಜೇಂದ್ರಗಡ ಇವರನ್ನು ಆಯ್ಕೆ ಮಾಡಲಾಗಿದೆ. ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ರಂಗಭೂಮಿ, ರಂಗಚಟುವಟಿಕೆಗಳಲ್ಲಿ, ಮಹತ್ವದ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ಇದುವರೆಗೆ ಪ್ರಸನ್ನ, ಸಿ. ಜಿ. ಕೆ., ಪಿ. ಜಿ. ಗಂಗಾಧರಸ್ವಾಮಿ, ಅಶೋಕ ಬಾದರದಿನ್ನಿ, ಮಾಲತಿಶ್ರೀ, ಸಿ. ಬಸವಲಿಂಗಯ್ಯ, ಬಿ. ಜಯಶ್ರೀ, ಡಾ. ಕೆ. ಮರುಳಸಿದ್ಧಪ್ಪ, ಚಿದಂಬರರಾವ್ ಜಂಬೆ, ಕೋಟಗಾನಹಳ್ಳಿ ರಾಮಯ್ಯ, ಡಾ. ಸುಭದ್ರಮ್ಮ ಮನ್ಸೂರು, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸ ಜಿ. ಕಪ್ಪಣ್ಣ, ಬಸವರಾಜ ಬೆಂಗೇರಿ, ಟಿ. ಎಸ್. ನಾಗಾಭರಣ, ಕೆ. ವಿ. ನಾಗರಾಜಮೂರ್ತಿ, ಡಾ. ಎಂ. ಜಿ. ಈಶ್ವರಪ್ಪ ಹಾಗೂ ಶಶಿಧರ ಅಡಪ ಇವರಿಗೆ ನೀಡುತ್ತಾ ಬರಲಾಗಿದೆ. ಈ ವರ್ಷ 2024 ನೇ ಸಾಲಿನ ಈ ಪ್ರಶಸ್ತಿಗೆ ಅರ್ಹರಾದವರು ರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾನಿರ್ದೇಶಕ ಮಹಾಂತೇಶ್ ಎಂ. ಗಜೇಂದ್ರಗಡ. ಕಳೆದ 42 ವರ್ಷಗಳಿಂದ ರಂಗಭೂಮಿ ಕ್ಷೇತ್ರ ಹಾಗೂ ವೃತ್ತಿ ನಾಟಕ ಕಂಪನಿಗಳಲ್ಲಿ ಅವಿರತವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಮಹಾಂತೇಶ್ ಎಂ. ಗಜೇಂದ್ರಗಡ