ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವ ದಿನಾಂಕ 18-11-2023ರಂದು ಸಂಜೆ 5 ಗಂಟೆಗೆ ಮರಕಡ ಮೈದಾನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಅವರ ಸ್ಮರಣಾರ್ಥ ‘ಶುಭವರ್ಣ ಪ್ರಶಸ್ತಿ’ ಪ್ರದಾನ, ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಮಂಗಳಾ ದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕ ಸ್ವಾಮಿ ರಘು ರಾಮಾನಂದ ಆಶೀವರ್ಚನ ನೀಡುವರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯಕ್ಷಗಾನ ಹಿರಿಯ ಗುರು ಶಿವರಾಮ ಪಣಂಬೂರು, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಶ್ರೀ ವಿಠಲ ಶೆಟ್ಟಿಗಾರ್
ಶ್ರೀ ಅಶೋಕ ಆಚಾರ್ಯ
ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತ ಒಳಗೊಂಡ ‘ಶುಭವರ್ಣ ಪ್ರಶಸ್ತಿ 2023’ನ್ನು ಹಿರಿಯ ಕಲಾವಿದ ಶ್ರೀ ವಿಠಲ ಶೆಟ್ಟಿಗಾರ್ ಕಾವೂರು ಅವರಿಗೆ, ರೂ.10,000/- ಮೊತ್ತ ಒಳಗೊಂಡ ‘ಶುಭವರ್ಣ ಸನ್ಮಾನ-2023’ನ್ನು ಕಟೀಲು ಮೇಳದ ವೇಣೂರು ಶ್ರೀ ಅಶೋಕ ಆಚಾರ್ಯ ಅವರಿಗೆ ಮತ್ತು ಮರಕಡ ಕಾರ್ತಿಕ್ ಕುಮಾರ್ ಸ್ಮರಣಾರ್ಥ ರೂ.5,000/-ಮೊತ್ತ ಒಳಗೊಂಡ ‘ಶುಭವರ್ಣ ಪ್ರತಿಭಾ ಪುರಸ್ಕಾರ-2023’ನ್ನು ಕಟೀಲು ಮೇಳದ ಕಲಾವಿದ ಶ್ರೀ ದೇವಿಪ್ರಸಾದ್ ಪೆರಾಜೆ ಅವರಿಗೆ ನೀಡಲಾಗುವುದು.
ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಲಕ್ಷ್ಮಣ ಕುಮಾರ್ ಮರಕಡ ನಿರ್ದೇಶನದಲ್ಲಿ ಪೂರ್ವ ರಂಗ, ನಂತರ ‘ಯಜ್ಞಶೇಷೋ ವೈ ರುದ್ರಃ’ ಎಂಬ ಶೀರ್ಷಿಕೆಯಡಿ ಪುರಾಣ ಪ್ರಸಂಗ ಮತ್ತು ಜಿಲ್ಲೆಯ ಮಹಿಳಾ ಕಲಾವಿದೆಯರಿಂದ ‘ಧೀರ ವೀರೋದ್ಧಾರ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.