ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ಕತೆ ರಚಿಸತಕ್ಕದ್ದು, ಕತೆ ಬರೆಯಲು ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು. ಕತೆಯ ವಿಷಯದ ಆಯ್ಕೆಗೆ ನಾಲ್ಕು ವಿಷಯ ನೀಡಲಾಗುವುದು. ಒಂದು ಶಾಲೆಯಿಂದ ಎರಡು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಸುವ ವಿದ್ಯಾರ್ಥಿಯು ಶಾಲಾ ಮುಖ್ಯೋಪಾದ್ಯಾಯರಿಂದ ಸ್ಪರ್ಧಿಸುವ ಕುರಿತು ಪತ್ರ ತರತಕ್ಕದ್ದು. ಸ್ಪರ್ಧೆಯು ದಿನಾಂಕ 25 ಜನವರಿ 2025 ರಂದು ಮಡಿಕೇರಿಯ ಸರಕಾರಿ ಪ್ರಾಥಮಿಕ ಶಾಲೆಯ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿರುವುದು. ನಡೆಯಲಿದೆ. ಈ ಕುರಿತು ಅರ್ಜಿ ಸಲ್ಲಿಸಲು ದಿನಾಂಕ 22 ಜನವರಿ 2025 ಕೊನೆಯ ದಿನವಾಗಿದೆ.
ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ :
ಅಧ್ಯಕ್ಷರು,
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಜಿ.ಆರ್.ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ.
ಹೆಚ್ಚಿನ ಮಾಹಿತಿಗಾಗಿ ಎಂ. ಪಿ. ಅಧ್ಯಕ್ಷರಾದ ಕೇಶವ ಕಾಮತ್ – 94483 46276, ಗೌರವ ಕಾರ್ಯದರ್ಶಿಗಳಾದ ಎಸ್. ಐ. ಮುನೀರ್ ಅಹಮದ್ – 98861 81613, ಶ್ರೀಮತಿ ರೇವತಿ ರಮೇಶ್ – 96632 54829 ಇವರನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಮಡಿಕೇರಿಯಲ್ಲಿ ಕೊಡಗಿನ ಗೌರಮ್ಮ ದತ್ತಿ ಕಾರ್ಯಕ್ರಮದ ಅಂಗವಾಗಿ ಸಣ್ಣ ಕಥೆ ಬರೆಯುವ ಸ್ಪರ್ಧೆ |
No Comments1 Min Read
Previous Articleಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸಮ್ಮೇಳನ 2025’ | ಜನವರಿ 19
Next Article ರಾಜ್ಯಮಟ್ಟದ ಯುವ ಪ್ರಶಸ್ತಿಗೆ ವಿದುಷಿ ಕಾವ್ಯಶ್ರೀ ಆಯ್ಕೆ