ಸೋಮವಾರಪೇಟೆ : ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 09 ಫೆಬ್ರವರಿ 2026ರಂದು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6-30ಕ್ಕೆ ಧ್ವಜಾರೋಹಣದೊಂದಿಗೆ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಮತ್ತು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ದ್ವಾರಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8-50 ಗಂಟೆಗೆ ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಇವರೊಂದಿಗೆ ಮೆರವಣಿಗೆ ಐಗೂರು ಕಬ್ಬಿಣ ಸೇತುವೆಯಿಂದ ಆರಂಭವಾಗಲಿದ್ದು, ಪರಮೇಶ್ ಕುಮಾರ್ ವಿ. ಇವರು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಮ್ಮೇಳನದ ಪ್ರವೇಶ ದ್ವಾರ, ಸಮ್ಮೇಳನದ ಸಭಾಂಗಣ, ವಿವಿಧ ಮಳಿಗೆಗಳ ಮತ್ತು ಸಮ್ಮೇಳನದ ವೇದಿಕೆ ಉದ್ಘಾಟನೆ ನಡೆಯಲಿದೆ. 10-30 ಗಂಟೆಗೆ ಎನ್.ಎಸ್. ಬೋಸರಾಜು ಇವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದು, ಸ್ಮರಣ ಸಂಚಿಕೆ ಮತ್ತು ಕನ್ನಡ ಕೃತಿಗಳು ಬಿಡುಗಡೆಗೊಳ್ಳಲಿದೆ.
ಮಧ್ಯಾಹ್ನ 1-30 ಗಂಟೆಗೆ ಗೀತ ಗಾಯನ ಕಾರ್ಯಕ್ರಮ, 2-30 ಗಂಟೆಗೆ ವಿಚಾರಗೋಷ್ಠಿ, 3-30 ಗಂಟೆಗೆ ಕವಿಗೋಷ್ಠಿ, 4-30 ಗಂಟೆಗೆ ಬಹಿರಂಗ ಅಧಿವೇಶನ ಹಾಗೂ 5-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ದತ್ತಿ ದಾನಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

