ಬೆಂಗಳೂರು : ‘ಸ್ಟೇಜ್ ಬೆಂಗಳೂರು’ ಪ್ರಸ್ತುತ ಪಡಿಸುವ ಗಿರೀಶ್ ಜಿಂದಪ್ಪ ಪರಿಕಲ್ಪನೆಯ ವಿಶಾಲ್ ಕಶ್ಯಪ್ (ನಿನಾಸಂ) ನಿರ್ದೇಶನದ ‘ನೋನಗಾನ್’ ನಾಟಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 9ನೇ ತಾರೀಖು ಸಂಜೆ 7.15ಕ್ಕೆ ಪ್ರದರ್ಶನಗೊಳ್ಳಲಿದೆ.
ನಾಟಕದ ವಿವರಣೆ
ನೋನಗನ್ ಒಂದು ವಿಭಿನ್ನವಾದ ಪ್ರಯೋಗಾತ್ಮಕ ನಾಟಕವಾಗಿದೆ. ಈ ನಾಟಕವನ್ನು ರಚಿಸಿದ್ದು ಸ್ವತಃ ಈ ನಾಟಕದ ನಟರು. ಒಬ್ಬೊಬ್ಬ ನಟರು ಒಂದೊಂದು ಪಾತ್ರವನ್ನು ರಚಿಸಿದ್ದಾರೆ. ಒಟ್ಟು 9 ನಟರಿದ್ದು 9 ಪಾತ್ರವನ್ನು ಅವರೇ ಆಯ್ಕೆ ಮಾಡಿ ರಚಿಸಿದ್ದಾರೆ. ಈ ಸಮಾಜದಲ್ಲಿರುವ ಒಡಕು, ಭ್ರಷ್ಟಾಚಾರ ಹಾಗೂ ಸಾಮಾನ್ಯ ಜನರ ಕಷ್ಟವನ್ನು ಆ ಪಾತ್ರವೇ ಹೇಳುತ್ತವೆ. ಒಂದು ವಿಭಿನ್ನಾದ ಪ್ರಯೋಗವನ್ನು ಮಾಡಬೇಕು ಎಂಬ ಹಂಬಲ ನಮ್ಮ ಸ್ಟೇಜ್ ಬೆಂಗಳೂರು ತಂಡದ್ದು.
ನಿರ್ದೇಶಕ ವಿಶಾಲ್ ಕಶ್ಯಪ್
ಕೋಲ್ಕತ್ತಾದಲ್ಲಿ ಹುಟ್ಟಿದ ಇವರು ಸುಮಾರು 15 ವರ್ಷದಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿರುಗಾಳಿ, ತುಘಲಕ್, ವಿಜಯನಾರಸಿಂಹ, ಕ್ರಮವಿಕ್ರಮ, ರಾವಿನದಿ ದಂಡೆಯಲ್ಲಿ, ದಿ ಮರ್ಚೆಂಟ್ ಆಫ್ ವೆನಿಸ್ ಹೀಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2016-17ನೇ ಸಾಲಿನ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲೀ ಒಂದು ವರ್ಷದ ರಂಗ ಅಭ್ಯಾಸವನ್ನು ಮಾಡಿದ ಇವರು ಕಂಸಾಯಣ, ಲಂಕೇಶರ ನನ್ನ ತಂಗಿಗೊಂದು ಗಂಡು ಕೊಡಿ ನಾಟಕವನ್ನು ನಿರ್ದೇಶಿಸಿದ್ದಾರೆ. ಅಘಾತ ಕ್ರಿಸ್ಟೀ ಬರೆದಿರುವ ‘ದಿ ಮರ್ಡರ್ ಆನ್ ದಿ ಓರಿಯಂಟ್ ಎಕ್ಸ್ ಪ್ರೆಸ್’ ಕಥೆಯನ್ನ ನಾಟಕವಾಗಿ ರಚಿಸಿದ್ದಾರೆ. ಪ್ರಸ್ತುತ 20 ದಿನದ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ ಮಾಡುತ್ತಿದ್ದು ಒಂದು ಪ್ರಯೋಗಾತ್ಮಕ ನಾಟಕದ ತಾಲೀಮು ನಡೆಸಿ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಈ ನಾಟಕದ ಶೀರ್ಷಿಕೆಯನ್ನು ರೋಹಿತ್ ರಾವ್ ಮಾಡಿದ್ದು, ಬೆಳಕಿನ ವಿನ್ಯಾಸ ಅಶೋಕ್ ಕೊಡಗು (ನಿನಾಸಂ) ಇವರದ್ದು, ನಿರ್ಮಾಣದ ಜವಾಬ್ದಾರಿಯನ್ನು ಸ್ಟೇಜ್ ಬೆಂಗಳೂರಿನ ಯೋಗೇಶ್ ಎಸ್. ವಹಿಸಿರುತ್ತಾರೆ.