ಪುತ್ತೂರು : ಬಹುವಚನಂ ವಿದ್ಯಾನಗರ ದರ್ಬೆ ಪುತ್ತೂರು ಇವರ ವತಿಯಿಂದ ನವೆಂಬರ್ ಮಾಸದ ವಿಶೇಷ ಉಪನ್ಯಾಸವನ್ನು ದಿನಾಂಕ 23 ನವೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ.
ಬಂಟ್ವಾಳ ತಾಲೂಕು ಬೆಂಜನಪದವಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಧೇಶ ತೋಳ್ಪಾಡಿಯವರು ‘ಅರ್ಧ ಶತಮಾನದ ಮಕ್ಕಳ ಕವಿತೆಗಳು’ ಈ ಬಗ್ಗೆ ಅವಲೋಕನ ಮಾಡಲಿದ್ದಾರೆ.

