ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು – ಪುತ್ತೂರು ಇವರ ಸಂಯೋಜನೆಯಲ್ಲಿ ಬನ್ನೂರಿನ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ಮೂರನೇ ಮಂಗಳವಾರ ನಡೆಯುವ ಯಕ್ಷಗಾನ ತಾಳಮದ್ದಲೆಯು ದಿನಾಂಕ : 18-07-2023ರಂದು ‘ಭೀಷ್ಮ ವಿಜಯ’ ಆಖ್ಯಾನದೊಂದಿಗೆ ನಡೆಯಿತು. ಪುಳು ಈಶ್ವರ ಭಟ್ ಈ ಕಲಾ ಸೇವೆಯನ್ನು ನಡೆಸಿಕೊಟ್ಟರು.
ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಶ್ರೀಪತಿ ನಾಯಕ್ ಅಜೇರ್, ಆನಂದ ಸವಣೂರು, ಚೆಂಡೆ ಮದ್ದಲೆಯಲ್ಲಿ ದಂಬೆ ಈಶ್ವರ ಶಾಸ್ತ್ರೀ, ಅಮೋಘ, ಆದಿತ್ಯ ಭಾಗವಹಿಸಿದರು. ಪಾತ್ರವರ್ಗದಲ್ಲಿ ಭೀಷ್ಮನ ಪಾತ್ರದಲ್ಲಿ ಶ್ರೀ ಗುಂಡ್ಯಡ್ಕ ಈಶ್ವರ ಭಟ್ ಮತ್ತು ಶ್ರೀ ಭಾಸ್ಕರ ಬಾರ್ಯ, ಪರಶುರಾಮನಾಗಿ ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ, ಸಾಲ್ವನಾಗಿ ಶ್ರೀ ಕುಂಬ್ಳೆ ಶ್ರೀಧರ ರಾವ್, ಅಂಬೆಯಾಗಿ ಶ್ರೀ ಚಂದ್ರಶೇಖರ ಭಟ್ ಬಡೆಕ್ಕಿಲ ಹಾಗೂ ವೃದ್ಧ ವಿಪ್ರನಾಗಿ ಶ್ರೀ ಸಚ್ಚಿದಾನಂದ ಪ್ರಭು ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕ ವೃಂದ ತಾಳಮದ್ದಲೆಯ ಮೆರುಗನ್ನು ಹೆಚ್ಚಿಸಿತು.