ಮಳವಳ್ಳಿ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಬಂಡಿ ಮಳವಳ್ಳಿ (ರಿ.) ಆಯೋಜಿಸುವ ಒಂದು ತಿಂಗಳ ಮಕ್ಕಳ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ದಿನಾಂಕ 16 ಡಿಸೆಂಬರ್ 2024ರಂದು ಬೆಳಿಗ್ಗೆ 11-30 ಗಂಟೆಗೆ ಮಳವಳ್ಳಿಯ ಅಮೃತೇಶ್ವರನ ಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ದಿನಾಂಕ 16 ಡಿಸೆಂಬರ್ 2024ರಿಂದ 24 ಜನವರಿ 2025ರವೆರೆಗೆ ನಡೆಯಲಿದೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ರಂಗ ಸಂಘಟಕರು ಶ್ರೀ ಧನುಷ್ ಎನ್., ಶಾಲಾ ಮುಖ್ಯೋಪಾಧ್ಯರು ಶ್ರೀ ಮಹೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸ್ವಾಮಿ ಎ.ಸಿ., ಕಂದೇಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಲತಾ, ಗ್ರಾಮ ಪಂಚಾಯತಿ ಸದಸ್ಯ ಶ್ರೀ ಪುಟ್ಟರಾಜು, ಸಮಾಜ ಸೇವಕ ಶ್ರೀ ಲಿಂಗರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಜಯಮ್ಮ ಮತ್ತು ಶ್ರೀಮತಿ ಭಾಗ್ಯಮ್ಮ ಇವರುಗಳು ಭಾಗವಹಿಸಲಿದ್ದಾರೆ.