ಮಂಡ್ಯ : ಸ್ಪೋರ್ಟ್ಸ್ ಆಂಡ್ ಕಲ್ಚರ್ ಅಕಾಡಮಿ ಫಾರ್ ಡಿಫರೆಂಟ್ಲಿ ಏಬಲ್ಡ್ (ರಿ.) ಇವರು ಆಶಾಸದನ ಮಂಡ್ಯ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಕಾರ್ಯಕ್ರಮ ‘ಸಕಾಡೋತ್ಸವ -2025’ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆಯನ್ನು ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಮಂಡ್ಯ ಸುಭಾಷ್ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 11 ಜನವರಿ 2025ರಂದು ಈ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ್ ಭಾ.ಆ.ಸೇ. ಇವರು ಉದ್ಘಾಟಿಸಲಿದ್ದು, ಮಂಡ್ಯದ ಸೈಂಟ್ ಥೋಮಸ್ ಮಿಷನ್ ಸೊಸೈಟಿ ವಲಯ ನಿರ್ದೇಶಕರಾದ ಗುರುಗಳು ಸೋಜನ್ ಎಂ.ಎಸ್.ಟಿ. ಇವರು ಆಶೀರ್ವಚನ ನೀಡಲಿದ್ದಾರೆ. ದಿನಾಂಕ 12 ಜನವರಿ 2025ರಂದು ಸಮಾರೋಪ ಸಮಾರಂಭ ನಡೆಯಲಿದೆ.