Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನಲ್ಲಿ ‘ರಾಗ – ರಂಗ’ ರಂಗಸಂಗೀತ ತರಗತಿಗಳು | ಜುಲೈ 05  

    June 23, 2025

    ‘ಕನ್ನಡ ಕಲರವ -2’ ಕಾರ್ಯಕ್ರಮದ ಪ್ರಯುಕ್ತ ಪ್ರಬಂಧ, ಭಾಷಣ ಹಾಗೂ ಸ್ವರಚಿತ ಕವನ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 20

    June 23, 2025

    ಖ್ಯಾತ ಲೇಖಕಿ ಕುಸುಮಾ ಶಾನಭಾಗ ನಿಧನ

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಂಕು ತಿಟ್ಟು ಭಾಗವತಿಕೆ ತರಗತಿಯ ಉದ್ಘಾಟನೆ | ಜನವರಿ 11
    Yakshagana

    ತೆಂಕು ತಿಟ್ಟು ಭಾಗವತಿಕೆ ತರಗತಿಯ ಉದ್ಘಾಟನೆ | ಜನವರಿ 11

    January 10, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯಲಿದೆ. ತಾಳ ಮದ್ದಳೆಯೊಂದಿಗೆ ಜಾಗಟೆಯ ಮಧುರ ಮೈತ್ರಿ ಬಯಸುವ ಕಲಾಸಕ್ತರಿಗೆ ಬೆಳ್ಳಿ ಹಬ್ಬದ ಸಂಸ್ಥೆ ನೀಡಿದ ಸುವರ್ಣ ಅವಕಾಶವಿದು. ಒಂದೇ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಾಮಾತೆಯ ಯುಗ್ಮ ನಯನಗಳಂತಿರುವ ಎರಡು ತಿಟ್ಟುಗಳ ಸಶಕ್ತ ಶಿಕ್ಷಣ ಸಿಗುವುದೆಂದರೆ ನಿಜಕ್ಕೂ ಕಲಾಭ್ಯಾಸಿಗಳ ಭಾಗ್ಯವೆನ್ನಬೇಕು. ಯಶಸ್ವೀ ಕಲಾವೃಂದದ ಕಲಾತ್ಮಕ ಯೋಚನೆಯ ಮಹತ್ವಪೂರ್ಣ ನಡೆಯಿದು. ತೆಂಕು ತಿಟ್ಟಿನ ಅಗ್ರಮಾನ್ಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಗುರುತನದಲ್ಲಿ ತರಗತಿಗಳು ನಡೆಯುವ ಸಂಗತಿ ಅತ್ಯಂತ ಸಂತೋಷ ಕೊಡುತ್ತದೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರು, ಪಟ್ಲ ಸತೀಶ ಶೆಟ್ಟಿಯವರಂತಹ ಘಟಾನುಘಟಿ ಕಲಾ ದಿಗ್ಗಜ ಶಿಷ್ಯರ ಗುರುಗಳಾದ ಮಾಂಬಾಡಿಯವರ ಗುರುತನ ಕರಾವಳಿಗೂ ಸುಲಲಿತವಾಗಿ ದಕ್ಕಲಿದೆ. 11 ಜನವರಿ 2025 ರಂದು ಬೆಳಿಗ್ಗೆ ಘಂಟೆ 10.00ಕ್ಕೆ ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಉದ್ಘಾಟಕರಾಗಿ ಆಗಮಿಸುವ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಡ್ಯದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆ ‘ಸಕಾಡೋತ್ಸವ -2025’ | ಜನವರಿ 11 ಮತ್ತು 12
    Next Article ಚಂದ್ರತೋಟದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಗೆ ಸನ್ಮಾನ
    roovari

    Add Comment Cancel Reply


    Related Posts

    ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 23, 2025

    ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ

    June 23, 2025

    ಗೋವಾ ಪಣಜಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ

    June 23, 2025

    ಪುತ್ತೂರಿನಲ್ಲಿ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹ | ಜೂನ್ 30ರಿಂದ ಜುಲೈ 06

    June 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.