ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.) ಇದರ ವತಿಯಿಂದ ರಾಜ್ಯಮಟ್ಟದ ಒಂಭತ್ತನೇ ‘ಕವಿಕಾವ್ಯ ಸಂಭ್ರಮ’ವನ್ನು ದಿನಾಂಕ 10 ನವೆಂಬರ್ 2024 ಭಾನುವಾರ ಬೆಳಗ್ಗೆ 10-00 ಗಂಟೆಗೆ ಹಾಸನದ ಸಾಲಗಾಮೆ ರಸ್ತೆ, ಅರಳೀಕಟ್ಟೆ ವೃತ್ತ ಇಲ್ಲಿರುವ ಸಂಸ್ಕೃತ ಭವನದಲ್ಲಿ ಮುಂಬಯಿಯ ಹಿರಿಯ ಸಾಹಿತಿ ಸಂಘಟಕ ವಿಶ್ವೇಶ್ವರ ಎನ್. ಮೇಟಿಯವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಭ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡುವರು. ನಾಡಿನ ಪ್ರಸಿದ್ಧ ಸಾಹಿತಿ ಸುಬ್ಬು ಹೊಲೆಯಾರ್ ಉದ್ಘಾಟನೆ ಮಾಡಲಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಗೌರವಾಧ್ಯಕ್ಷರಾದ ರವಿ ನಾಕಲಗೂಡುರವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಂಭ್ರಮನಾಧ್ಯಕ್ಷ ಡಾ. ಅಮರೇಶ್ ಪಾಟೀಲ, ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು, ಸಮಾಜ ಸೇವಕ ಗಣೇಶ್ ತಮ್ಲಾಪುರ, ನಾಗರಾಜ್ ದೊಡ್ಡಮನಿ, ಸಾಹಿತಿಗಳಾದ ಎನ್. ಶೈಲಜಾ ಹಾಸನ, ತುರುವೇಕೆರೆ ಪ್ರಸಾದ್, ಸಿ.ಎನ್.ನೀಲಾವತಿ, ಪದ್ಮಾವತಿ ವೆಂಕಟೇಶ್ ಮುಂತಾದವರು ಭಾಗವಹಿಸಲಿದ್ದಾರೆ.
ಸಂಭ್ರಮದಲ್ಲಿ ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ (ಲಲಿತ ಪ್ರಬಂಧ ವಿಭಾಗ), ದಿ. ಸಿ.ಪಿ. ನಾರಾಯಣಾಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ (ಕಾವ್ಯ ವಿಭಾಗ), ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ (ಹಾಸ್ಯ ಪ್ರಬಂಧ ವಿಭಾಗ), ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ (ಕಥಾ ವಿಭಾಗ), ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಗದ್ಯ ಮಾಣಿಕ್ಯ ಪ್ರಶಸ್ತಿ (ಸಂಕೀರ್ಣ ವಿಭಾಗ) ಹಾಗೂ ರಾಜ್ಯ ಮಟ್ಟದ ಹೊಯ್ಸಳ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಕಾಶನದ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಸಾಹಿತಿ ಪ್ರಭಾಮಣಿ ನಾಗರಾಜ್ ಇವರು ಉತ್ತರ ಕನ್ನಡ ಜಿಲ್ಲೆಯ ಭಾರತಿ ಕೇದಾರಿ ನಲವಡೆಯವರ ‘ಅವಕಾಶವೆಂಬ ಅಮೃತ ಘಳಿಗೆ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಎಸ್.ಎಂ. ದೇವರಾಜೇಗೌಡ ಇವರು ಅರಕಲಗೂಡು ತಾಲ್ಲೂಕಿನ ಹೊ.ರಾ. ಪರಮೇಶ್ ಹೊಡೇನೂರುರವರ “ಹೊಟ್ಟೇಗ್ ಏನ್ ತಿಂತೀರಾ ?” ಕೃತಿ ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ.
‘ರಾಜ್ಯ ಮಟ್ಟದ ಜನ್ಯ ಕಾವ್ಯ ಪ್ರಶಸ್ತಿ’ ಮತ್ತು ‘ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮುಂಬಯಿ ಸಾಹಿತಿ ವಾಣಿ ಶೆಟ್ಟಿ ವಹಿಸಲಿದ್ದಾರೆ. ಬಿ.ಎಂ. ಭಾರತಿ ಹಾದಿಗೆಯವರು ಆಶಯ ನುಡಿಗಳನ್ನಾಡುವರು. ಕುವೆಂಪು ವಿಶ್ವ ವಿದ್ಯಾಲಯದ ಡಾ. ಎಚ್.ಕೆ. ಹಸೀನಾರವರು ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಧಾರವಾಡದ ಸಾಹಿತಿ ಎ.ಎ. ದರ್ಗಾರವರು ರಾಜ್ಯಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಶ್ ಗುರೂಜಿ, ಜೆ.ಜಿ.ನರಸಿಂಹಮೂರ್ತಿ, ಕೆ.ಟಿ.ಜಯಶ್ರೀ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ಪರಮಾನಂದ ದಳಪತಿ ಮುಂಬಯಿ, ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ಡಾ. ನಂಜಪ್ಪ ಕೋಲಾರ, ರಮಾ ಬಸು ಗದಗ, ಜಯಶಂಕರ್ ಬೆಳಗುಂಬ, ನೇತ್ರಾ ರುದ್ರಾಪೂರಮಠ ಹುಬ್ಬಳ್ಳಿ, ಉಷಾ ಪ್ರಕಾಶ್ ಶಿವಮೊಗ್ಗ, ದಾಕ್ಷಾಯಿಣಿ ಪಿ.ಸಿ. ಶಿರಸಿ, ಗಿರಿಜಾ ನಿರ್ವಾಣಿ ಹಾಸನ, ಮಹಮದ್ ಅಜರುದ್ದೀನ್ ಮಂಡ್ಯ, ಮಮತ ಎಸ್. ಬಸವನಕೋಟೆ ದಾವಣಗೆರೆ, ಎಂ.ಸಿ. ಮಂಜುಳಾ ಮೈಸೂರು, ರುಮಾನ ಜಬೀರ್ ಕೊಡಗು, ದೀಪಕ್ ನಿಡಘಟ್ಟ ಚಿಕ್ಕಮಗಳೂರು, ಚೇತನ್ ಎಚ್.ಎಂ. ಕೊಟ್ಟೂರು ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಡಿ. ಸುಜಲಾದೇವಿ, ವಾಸು ಸಮುದ್ರವಳ್ಳಿ, ದೇಸು ಆಲೂರು, ರೇಖಾ ಪ್ರಕಾಶ್, ಎಚ್. ಬಿ. ಚೂಡಾಮಣಿ, ನಿರಂಜನ್ ಎ.ಸಿ. ಬೇಲೂರು ಮಾಡಲಿದ್ದಾರೆ.